ನಿನ್ನೆಯಷ್ಟೇ ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ತಮ್ಮ 60 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಕುಟುಂಬದ ಸದಸ್ಯರೊಂದಿಗೆ ಸ್ಪೈನ್ನ ಐಬಿಜಾಕ್ಕೆ ತೆರಳಿದ್ದ ನಾಗಾರ್ಜುನ ಅಲ್ಲೇ ತಮ್ಮ ಹುಟ್ಟುಹಬ್ಬ ಸೆಲಬ್ರೇಟ್ ಮಾಡಿದ್ದಾರೆ.
ಮಾವನ ಬರ್ತಡೇಗೆ ಸಮಂತಾ ಧರಿಸಿದ್ದ ಈ ಪಿಂಕ್ ಡ್ರೆಸ್ ಬೆಲೆ ಎಷ್ಟು ಗೊತ್ತಾ...? - ಸಮಂತಾ
ಮಾವ ಅಕ್ಕಿನೇನಿ ನಾಗಾರ್ಜುನ ಹುಟ್ಟುಹಬ್ಬಕ್ಕೆ ಸಮಂತಾ ಧರಿಸಿದ್ದ ಡ್ರೆಸ್ ಬೆಲೆ ಬರೋಬ್ಬರಿ 2 ಲಕ್ಷ ರೂಪಾಯಿ ಎನ್ನಲಾಗಿದೆ. ನಿನ್ನೆ ನಾಗಾರ್ಜುನ ಸ್ಪೈನ್ನ ಐಬಿಜಾದಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
![ಮಾವನ ಬರ್ತಡೇಗೆ ಸಮಂತಾ ಧರಿಸಿದ್ದ ಈ ಪಿಂಕ್ ಡ್ರೆಸ್ ಬೆಲೆ ಎಷ್ಟು ಗೊತ್ತಾ...?](https://etvbharatimages.akamaized.net/etvbharat/prod-images/768-512-4293955-thumbnail-3x2-samdress.jpg)
ನಾಗಾರ್ಜುನ ಜೊತೆ ಪತ್ನಿ ಅಮಲಾ, ಪುತ್ರರಾದ ನಾಗಚೈತನ್ಯ, ಸಮಂತಾ, ಅಖಿಲ್ ಅಕ್ಕಿನೇನಿ ಹಾಗೂ ಸ್ಪೈನ್ನಲ್ಲಿರುವ ನಾಗಾರ್ಜುನ ಸ್ನೇಹಿತರು ಬರ್ತಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಇನ್ನು ಈ ಪಾರ್ಟಿಗಾಗಿ ಸಮಂತಾ ಪಿಂಕ್ ಬಣ್ಣದ ಒನ್ ಶೋಲ್ಡರ್ ಷಿಮ್ಮರ್ ಡ್ರೆಸ್ ಧರಿಸಿದ್ದರು. ಈ ಡ್ರೆಸ್ನಲ್ಲಿ ಸಮಂತಾ ಬಹಳ ಮುದ್ದಾಗಿ ಕಾಣುತ್ತಿದ್ದರು. ಅಂದಹಾಗೆ ಈ ಡ್ರೆಸ್ ಬೆಲೆ ಎಷ್ಟು ಗೊತ್ತಾ...? ಬರೋಬ್ಬರಿ 2 ಲಕ್ಷ ರೂಪಾಯಿ. ಡ್ರೆಸ್ ಬೆಲೆ ಕೇಳಿದವರು ಶಾಕ್ ಆಗಿದ್ದಾರೆ. ಈ ಡ್ರೆಸ್ ಧರಿಸಿದ್ದ ಫೋಟೋವನ್ನು ಸ್ಯಾಮ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಕೊರಿಯನ್ ಸಿನಿಮಾ 'ಮಿಸ್ ಗ್ಯ್ರಾನಿ' ರೀಮೇಕ್ ಆದ 'ಓ ಬೇಬಿ' ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ಸಮಂತಾ 96 ತಮಿಳು ರೀಮೇಕ್ ಸಿನಿಮಾಗೆ ಸಹಿ ಮಾಡಿದ್ದಾರೆ. ಈ ಚಿತ್ರಕ್ಕೆ ಶರ್ವಾನಂದ್ ನಾಯಕನಾಗಿ ನಟಿಸಿದ್ದರೆ ದಿಲ್ರಾಜು ಹಣ ಹೂಡಿದ್ದಾರೆ.