ನಿರ್ದೇಶಕ ರಾಮ್ಗೋಪಾಲ್ ವರ್ಮಾ ಬಗ್ಗೆ ನಿಮಗೆ ಹೇಳುವ ಅಗತ್ಯವೇ ಇಲ್ಲ. ವಿವಾದಾತ್ಮಕ ಸ್ಟೇಟ್ಮೆಂಟ್, ವಿವಾದಾತ್ಮಕ ಸಿನಿಮಾಗಳ ನಿರ್ದೇಶನದಿಂದಲೇ ಅವರು ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.
ರಾಮ್ಗೋಪಾಲ್ ವರ್ಮಾಗೆ ಮುಂದಿನ ಜನ್ಮದಲ್ಲಿ ಏನಾಗಿ ಹುಟ್ಟಲು ಇಷ್ಟವಂತೆ ಗೊತ್ತಾ? - undefined
ನಾನು ಮುಂದಿನ ಜನ್ಮದಲ್ಲಿ ಬೋನಿ ಕಪೂರ್ ಆಗಿ ಹುಟ್ಟಲು ಬಯಸುತ್ತೇನೆ ಎಂದು ನಿರ್ದೇಶಕ ರಾಮ್ಗೋಪಾಲ್ ವರ್ಮಾ ಹೇಳಿಕೊಂಡಿದ್ದಾರೆ. 'ಆಲಿ ತೋ ಸರದಾಗ' ಕಾರ್ಯಕ್ರಮದಲ್ಲಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಯೊಂದಕ್ಕೆ ವರ್ಮಾ ಆ ರೀತಿ ಉತ್ತರಿಸಿದ್ದಾರೆ.
'ಮುಂದಿನ ಜನ್ಮದಲ್ಲಿ ನಾನು ಶ್ರೀದೇವಿ ಪತಿ ಬೋನಿಕಪೂರ್ ಆಗಿ ಹುಟ್ಟಲು ಬಯಸುತ್ತೇನೆ' ಎಂದು ವರ್ಮಾ ಅವರೇ ಹೇಳಿಕೊಂಡಿದ್ದಾರೆ. ಖ್ಯಾತ ಹಾಸ್ಯ ನಟ ಆಲಿ ನಡೆಸಿಕೊಡುವ ತೆಲುಗಿನ 'ಆಲಿ ತೋ ಸರದಾಗ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಅವರ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ವರ್ಮಾ ಉತ್ತರಿಸಿದ ಪರಿ ಆ ರೀತಿ ಇತ್ತು.
ವೈನ್ ಹಾಗೂ ಹುಡುಗಿಯರಲ್ಲಿ ನಿಮಗೆ ಯಾವುದು ಇಷ್ಟ ಎಂದು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ವರ್ಮಾ, ಎಲ್ಲರೂ ಅಂದುಕೊಂಡಂತೆ 'ಹುಡುಗಿಯರು' ಎಂದು ಉತ್ತರಿಸಿದರು. ಹುಡುಗಿಯಾಗಿದ್ರೆ ನೀವು ಯಾವ ವೃತ್ತಿ ಆರಿಸಿಕೊಳ್ಳುತ್ತಿದ್ರಿ ಎಂದು ಕೇಳಿದ್ದಕ್ಕೆ, 'ನನ್ನ ಮೇಲೆ ನಿಮಗೆ ಇಷ್ಟು ಕೋಪ ಏಕೆ....? ನಾನು ಹುಟ್ಟಿ ಬೆಳೆದು ಬದುಕುತ್ತಿರುವುದೇ ಅಂದವಾದ ಹುಡುಗಿಯರನ್ನು ನೋಡಲು' ಎಂದು ಬೋಲ್ಡ್ ಆಗಿ ಉತ್ತರಿಸಿದರು. ಅಷ್ಟೇ ಅಲ್ಲ ಶ್ರೀದೇವಿಯನ್ನು ಬಹಳವಾಗಿ ಆರಾಧಿಸುತ್ತಿದ್ದ ವರ್ಮಾ, ನಿಮ್ಮ ಕೊನೆಯ ಆಸೆ ಏನು..? ಎಂಬ ಪ್ರಶ್ನೆಗೆ 'ಮುಂದಿನ ಜನ್ಮದಲ್ಲಿ ನಾನು ಬೋನಿ ಕಪೂರ್ ಆಗಿ ಹುಟ್ಟಲು ಇಷ್ಟಪಡುತ್ತೇನೆ' ಎಂದು ಉತ್ತರಿಸಿದರು. ಈ ಕಾರ್ಯಕ್ರಮ ಹಳೆಯದಾದರೂ ವಿಡಿಯೋ ಈಗ ವೈರಲ್ ಆಗುತ್ತಿದೆ.