2005 ರಲ್ಲಿ ಬಿಡುಗಡೆಯಾದ 'ಸೂಪರ್' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಕರ್ನಾಟಕದ ಸ್ವೀಟಿ, ಇಂದು ಆಂಧ್ರ, ತೆಲಂಗಾಣ ಮಾತ್ರವಲ್ಲದೆ ತಮಿಳುನಾಡು, ಕರ್ನಾಟಕದಲ್ಲಿ ಕೂಡಾ ಸಾಕಷ್ಟು ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಚಿತ್ರರಂಗದಲ್ಲಿ 15 ವರ್ಷಗಳನ್ನು ಪೂರೈಸಿದ ಅನುಷ್ಕಾ ಶೆಟ್ಟಿ ಅನುಷ್ಕಾ ಚಿತ್ರರಂಗಕ್ಕೆ ಕಾಲಿಟ್ಟು 15 ವರ್ಷಗಳು ಪೂರೈಸಿದ ಹಿನ್ನೆಲೆ ನಿನ್ನೆ ಅಂದರೆ ಗುರುವಾರ, ಹೈದರಾಬಾದ್ನಲ್ಲಿ 'ನಿಶ್ಯಬ್ಧಂ' ಚಿತ್ರತಂಡ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಟಾಲಿವುಡ್ ಖ್ಯಾತ ನಿರ್ಮಾಪಕ ಕೆ.ರಾಘವೇಂದ್ರ ರಾವ್, ಖ್ಯಾತ ನಿರ್ದೇಶಕ ರಾಜಮೌಳಿ ಸೇರಿದಂತೆ ಅನುಷ್ಕಾ ಸಿನಿಮಾ ಮಾಡಿದ ನಿರ್ದೇಶಕರು, ನಿರ್ಮಾಪಕರು ಹಾಗೂ ಇನ್ನಿತರರು ಆಗಮಿಸಿದ್ದರು. 'ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಾಪಕ ಕೆ. ರಾಘವೇಂದ್ರ ರಾವ್, ನಾನು 'ಶ್ರೀ ರಾಮದಾಸು' ಸಿನಿಮಾ ಮಾಡುತ್ತಿದ್ದ ವೇಳೆ ನಾಗಾರ್ಜುನ ಅನುಷ್ಕಾರನ್ನು ನನಗೆ ಪರಿಚಯಿಸಿದರು. ಸ್ವೀಟಿ ಎಂದು ಕರೆಯುತ್ತಿದ್ದಂತೆ ಮೆಟ್ಟಿಲು ಏರುತ್ತಾ ಬಂದ ಆಕೆಯನ್ನು ನೋಡಿ ನನಗೆ ಖುಷಿಯಾಯ್ತು. ನೀನು ದಕ್ಷಿಣದಲ್ಲೇ ಟಾಪ್ ಹೀರೋಯಿನ್ ಆಗುವುದು ಖಂಡಿತ ಎಂದು ಅದೇ ದಿನ ಆಕೆಗೆ ಹೇಳಿದ್ದೆ. ಅದರಂತೆ ಅನುಷ್ಕಾ ಇಂದು ದೊಡ್ಡ ಸ್ಥಾನ ಸಂಪಾದಿಸಿದ್ದಾರೆ' ಎಂದು ಹೇಳಿದರು.
ಚಿತ್ರರಂಗದಲ್ಲಿ 15 ವರ್ಷಗಳನ್ನು ಪೂರೈಸಿದ ಅನುಷ್ಕಾ ಶೆಟ್ಟಿ ನಿರ್ದೇಶಕ ರಾಜಮೌಳಿ ಮಾತನಾಡಿ, 'ಅನುಷ್ಕಾ ಕೇವಲ ನಟಿ ಮಾತ್ರವಲ್ಲ, ಹೃದಯವಂತಿಕೆಯ ಹೆಣ್ಣು ಮಗಳು ,ಆಕೆ ನಮ್ಮ ಕುಟುಂಬಕ್ಕೆ ಬಹಳ ಹತ್ತಿರವಾಗಿದ್ದಾರೆ. ನನ್ನ 'ಬಾಹುಬಲಿ' ಸಿನಿಮಾದಲ್ಲಿ ಅನುಷ್ಕಾ ಮಾಡಿದ ದೇವಸೇನ ಪಾತ್ರದ ಬಗ್ಗೆ ನನಗೆ ಇಂದಿಗೂ ಹೆಮ್ಮೆ ಇದೆ. ಆಕೆಗೆ ನಮ್ಮೆಲ್ಲರ ಹೃದಯದಲ್ಲಿ ಪ್ರತ್ಯೇಕ ಸ್ಥಾನ ಇದೆ' ಎಂದು ಹೇಳಿಕೊಂಡರು.
ಚಿತ್ರರಂಗದಲ್ಲಿ 15 ವರ್ಷಗಳನ್ನು ಪೂರೈಸಿದ ಅನುಷ್ಕಾ ಶೆಟ್ಟಿ ನಿರ್ದೇಶಕ ಪೂರಿ ಜಗನ್ನಾಥ್ ಕೂಡಾ ಅನುಷ್ಕಾ ಬಗ್ಗೆ ಮಾತನಾಡುತ್ತಾ 'ರವಿತೇಜ, ಚಾರ್ಮಿ ಹಾಗೂ ನಾನು ಅನುಷ್ಕಾ ಅವರನ್ನು ಅಮ್ಮ ಎಂದೇ ಕರೆಯುತ್ತೇವೆ. ಆಕೆಗೆ ಇರುವ ಗೌರವ, ಸ್ಥಾನ ಮಾನ ಅಂತದ್ದು, ಆಕೆಯಿಂದ ಕಲಿಯುವುದು ಸಾಕಷ್ಟಿದೆ' ಎಂದು ಹೇಳಿದರು.
ಚಿತ್ರರಂಗದಲ್ಲಿ 15 ವರ್ಷಗಳನ್ನು ಪೂರೈಸಿದ ಅನುಷ್ಕಾ ಶೆಟ್ಟಿ ವೇದಿಕೆಯಲ್ಲಿದ್ದ ಅನುಷ್ಕಾ ಕೂಡಾ ಮಾತನಾಡಿ, 'ಪ್ರತಿಯೊಬ್ಬರೂ ನನ್ನ 15 ವರ್ಷಗಳ ಸಿನಿಜರ್ನಿಯ ಬಗ್ಗೆ ಮಾತನಾಡುತ್ತಿದ್ದಾರೆ. ಯಾರಿಗೆ ಹೋಲಿಸಿದರೂ ನಾನು ಮಾಡಿರುವ ಸಾಧನೆ ಕಡಿಮೆ. ನನ್ನ ಮೇಲೆ ನೀವೆಲ್ಲಾ ಇಟ್ಟಿರುವ ನಂಬಿಕೆಯನ್ನು ನಾನು ಉಳಿಸಿಕೊಳ್ಳುತ್ತೇನೆ. ಇನ್ನೂ ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಶ್ರಮ ವಹಿಸುತ್ತೇನೆ. 'ಸೂಪರ್' ಚಿತ್ರದಿಂದ 'ನಿಶ್ಯಬ್ದಂ' ಚಿತ್ರದವರೆಗೂ ಪ್ರತಿ ನಿರ್ದೇಶಕರು, ನಿರ್ಮಾಪಕರು ಸಹನಟ-ನಟಿಯರು, ತಂತ್ರಜ್ಞರು ನನ್ನ ಮೇಲೆ ತೋರಿದ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ' ಎಂದು ಅನುಷ್ಕಾ ಹೇಳಿದರು.