ಇಂದು ಎಲ್ಲೆಲ್ಲೂ ದಸರಾ, ವಿಜಯದಶಮಿ ಹಬ್ಬದ ಕಂಪು ಪಸರಿಸುತ್ತಿದೆ. ಈ ಹಬ್ಬದ ಸಂಭ್ರಮವನ್ನು ಸ್ನೇಹಿತರು, ಬಂಧು ಬಾಂಧವರ ಜೊತೆ ಹಂಚಿಕೊಳ್ಳುತ್ತಿದ್ದಾರೆ. ಅದ್ರಲ್ಲೂ ಸೆಲೆಬ್ರೆಟಿಗಳು ತಮ್ಮ ಅಭಿಮಾನಿಗಳಿಗೆ ದಸರಾ ಹಬ್ಬದ ಶುಭಾಶಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ತಿಳಿಸುತ್ತಾರೆ.
ದಸರಾ ಹಬ್ಬಕ್ಕೆ ಕನ್ನಡದಲ್ಲೇ ವಿಶ್ ಮಾಡಿದ ಬಹುಭಾಷೆ ತಾರೆ ಅನುಷ್ಕಾ ಶೆಟ್ಟಿ - ದಸರಾ ಹಬ್ಬದ ಶುಭಾಷಯಗಳು
ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ತಾರೆಯಾದ್ರೂ ತಮ್ಮ ತವರು ಭಾಷೆ ಕನ್ನಡದಲ್ಲೇ ಹಬ್ಬಕ್ಕೆ ವಿಶ್ ಮಾಡಿರುವುದು ಕನ್ನಡಿಗರ ಮನಸ್ಸಿಗೆ ತಟ್ಟಿದೆ..
ದಸರಾ ಹಬ್ಬಕ್ಕೆ ಕನ್ನಡದಲ್ಲೇ ವಿಶ್ ಮಾಡಿದ್ರು ಅನುಷ್ಕಾ ಶೆಟ್ಟಿ
ಮತ್ತೊಂದು ವಿಶೇಷ ಏನಂದ್ರೆ ತೆಲುಗು ನಟಿ ಅನುಷ್ಕಾ ಶೆಟ್ಟಿ ದಸರಾ ಹಬ್ಬದ ಶುಭಾಶಯವನ್ನು ಕನ್ನಡಲ್ಲಿಯೇ ತಿಳಿಸಿದ್ದಾರೆ. ಈ ಬಗ್ಗೆ ತಮ್ಮ ಫೇಸ್ಬುಕ್ನಲ್ಲಿ ಹಂಚಿಕೊಂಡಿರುವ ಅವರು, 'ದಸರಾ ಹಬ್ಬದ ಶುಭಾಶಯಗಳು, ಒಳ್ಳೆಯದಾಗಲಿ, ಸುರಕ್ಷಿತವಾಗಿರಿ ಎಂದು ಬರೆದುಕೊಂಡಿದ್ದಾರೆ.
ಬಹುಭಾಷೆ ತಾರೆಯಾದರೂ ತಮ್ಮ ತವರು ಭಾಷೆ ಕನ್ನಡದಲ್ಲೇ ಹಬ್ಬಕ್ಕೆ ವಿಶ್ ಮಾಡಿರುವುದು ಕನ್ನಡಿಗರ ಮನಸ್ಸಿಗೆ ತಟ್ಟಿದೆ.
Last Updated : Oct 25, 2020, 5:15 PM IST