ಕರ್ನಾಟಕ

karnataka

ETV Bharat / sitara

'ನಿಶ್ಯಬ್ಧಂ' ಚಿತ್ರದ ಅನುಷ್ಕಾ ಶೆಟ್ಟಿ ಫಸ್ಟ್​​​​​ಲುಕ್ ಬಿಡುಗಡೆ - ಕೋನ ಫಿಲ್ಮ್​ ಕಾರ್ಪೊರೇಷನ್

ಅನುಷ್ಕಾ ಶೆಟ್ಟಿ ಹೊಸ ಸಿನಿಮಾ 'ನಿಶ್ಯಬ್ಧಂ' ಫಸ್ಟ್​​​ಲುಕ್ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಅನುಷ್ಕಾ ವಿಶೇಷ ಚೇತನ ಯುವತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಹೇಮಂತ್ ಮಧುರ್​​​​ಕರ್ ನಿರ್ದೇಶಿಸುತ್ತಿದ್ದಾರೆ.

ಅನುಷ್ಕಾ ಶೆಟ್ಟಿ

By

Published : Sep 11, 2019, 1:17 PM IST

'ಭಾಗಮತಿ' ಸಿನಿಮಾ ನಂತರ ಸಿನಿಮಾಗಳಿಂದ ದೂರವಿದ್ದ ಅನುಷ್ಕಾ ಶೆಟ್ಟಿ ಇದೀಗ 'ನಿಶ್ಯಬ್ಧಂ' ಚಿತ್ರದ ಮೂಲಕ ವಾಪಸಾಗುತ್ತಿದ್ದಾರೆ. ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ವಿಶೇಷ ಚೇತನ ಯುವತಿ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಇಷ್ಟು ವರ್ಷಗಳ ಗ್ಯಾಪ್​​​​ನಲ್ಲಿ ಅನುಷ್ಕಾ ತೂಕ ಕೂಡಾ ಕಡಿಮೆ ಮಾಡಿಕೊಂಡು ಬಹಳ ಸ್ಲಿಮ್ ಆಗಿದ್ದಾರೆ.

ಇನ್ನು 'ನಿಶ್ಯಬ್ಧಂ' ಚಿತ್ರತಂಡ ಅನುಷ್ಕಾ ಫಸ್ಟ್​​​​ಲುಕ್ ಬಿಡುಗಡೆ ಮಾಡಿದೆ. ಚಿತ್ರದಲ್ಲಿ ಅನುಷ್ಕಾ ಸಾಕ್ಷಿ ಎಂಬ ಪಾತ್ರದಲ್ಲಿ ನಟಿಸುತ್ತಿದ್ದು 'ಸಾಕ್ಷಿ A MUTE ARTIST' ಎಂಬ ಕ್ಯಾಪ್ಷನ್ ನೀಡಲಾಗಿದೆ. ಪೋಸ್ಟರ್​​​ನಲ್ಲಿ ಅನುಷ್ಕಾ ಪೇಂಟಿಂಗ್ ಮಾಡುತ್ತಿದ್ದಾರೆ. ಹೇಮಂತ್ ಮಧುರ್​​​​ಕರ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಅಂಜಲಿ, ಶಾಲಿನಿ ಪಾಂಡೆ, ಸುಬ್ಬರಾಜು, ಅವಸರಾಲ ಶ್ರೀನಿವಾಸ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಹಾಲಿವುಡ್ ನಟ ಮ್ಯಾಡಸನ್ ಕೂಡಾ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ಜೊತೆ ಸೇರಿ ಕೋನ ಫಿಲ್ಮ್​ ಕಾರ್ಪೊರೇಷನ್ ಈ ಸಿನಿಮಾವನ್ನು ನಿರ್ಮಿಸುತ್ತಿದೆ. ಈ ಮೊದಲು ಬಿಡುಗಡೆಯಾಗಿದ್ದ ಚಿತ್ರದ ಪೋಸ್ಟರ್ ಕೂಡಾ ಎಲ್ಲರ ಗಮನ ಸೆಳೆದಿತ್ತು.

ABOUT THE AUTHOR

...view details