ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇದೀಗ ಗರ್ಭಿಣಿ ಆಗಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಈ ಸ್ಟಾರ್ ದಂಪತಿ ತಮ್ಮ ನಿತ್ಯ ಜೀವನದಲ್ಲಿ ಒಂದಿಲ್ಲೊಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಅನುಷ್ಕಾ ತಾವು ತುಂಬು ಗರ್ಭಿಣಿಯಾಗಿದ್ದರೂ ಶೀರ್ಷಾಸನ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಶೀರ್ಷಾಸನ ಮಾಡಿ ಸೈ ಎನಿಸಿಕೊಂಡ ತುಂಬು ಗರ್ಭಿಣಿ ಅನುಷ್ಕಾ! - Anushka Sharma news
ಅನುಷ್ಕಾ ಶರ್ಮಾ ತಾವು ತುಂಬು ಗರ್ಭಿಣಿಯಾಗಿದ್ದರೂ ಶೀರ್ಷಾಸನ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ..
ಅರೇ.. ಶೀರ್ಷಾಸನ ಮಾಡಿದ್ರು ತುಂಬು ಗರ್ಭಿಣಿ ಅನುಷ್ಕಾ!
ನಟಿ ಅನುಷ್ಕಾ ಶರ್ಮಾ ಶೀರ್ಷಾಸನ ಮಾಡಿರುವ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣಲ್ಲಿ ಹಂಚಿಕೊಂಡು ಸುದೀರ್ಘ ಬರಹ ಬರೆದಿದ್ದಾರೆ. ಶೀರ್ಷಾಸನದ ಬಗ್ಗೆ ಬರೆದಿರುವ ನಟಿ, ಯೋಗ ನನ್ನ ಜೀವನದ ಒಂದು ಭಾಗ.
ಈಗನ ಸ್ಥಿತಿಯಲ್ಲಿ ತಲೆಕೆಳಗಾಗಿ ನಿಲ್ಲುವುದು ಸುಲಭವಲ್ಲ. ನನ್ನ ದೇಹದ ಸಮತೋಲನ ಕಾಯ್ದುಕೊಳ್ಳಲು ನನ್ನ ಪತಿ ನೆರವಾಗಿದ್ದಾರೆ. ಇದೆಲ್ಲವೂ ನನ್ನ ಯೋಗ ಶಿಕ್ಷಕರ ಮೇಲ್ವಿಚಾರಣೆಯಲ್ಲೇ ನಡೆಯುತ್ತಿದೆ. ಈ ಸಮಯದಲ್ಲಿ ಯೋಗ ಅಭ್ಯಾಸ ಮಾಡುತ್ತಿರುವುದು ನನಗೆ ಹೆಮ್ಮೆ ಅನ್ನಿಸುತ್ತಿದೆ ಎಂದು ಬರೆದಿದ್ದಾರೆ