ಹಥ್ರಾಸ್ ಗ್ಯಾಂಗ್ ರೇಪ್ ಮಾಸುವ ಮುನ್ನವೇ ಮತ್ತೊಂದು ಅಮಾನವೀಯ ರೇಪ್ ಪ್ರಕರಣ ಉತ್ತರ ಪ್ರದೇಶದ ಬಲರಾಮಪುರ ಜಿಲ್ಲೆಯಲ್ಲಿ ನಡೆದಿದೆ. 22 ವರ್ಷದ ಯುವತಿ ಮೇಲೆ ಪಾಪಿಗಳು ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ.
ಈ ಕ್ರೂರ ಘಟನೆ ಬಗ್ಗೆ ಇಂದು ಬಾಲಿವುಡ್ನ ಹಲವು ತಾರೆಯರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಬರೆದಿರುವ ನಟಿ ಅನುಷ್ಕ ಶರ್ಮಾ, ಹಥ್ರಾಸ್ ಘಟನೆ ನಡೆದು ಕೆಲವೇ ದಿನಗಳಾಗಿದೆ. ಆದ್ರೆ ಅಂತಹುದ್ದೇ ಮತ್ತೊಂದು ಕ್ರೂರ ಅತ್ಯಾಚಾರದ ಬಗ್ಗೆ ಕೇಳುತ್ತಿದ್ದೇವೆ. ಯುವ ಜನರ ಮೇಲೆ ಇಂತಹ ಕ್ರೂರಿ ಕೆಲಸವನ್ನು ಯಾವ ಜಗತ್ತಿನ ರಾಕ್ಷಸರು ಮಾಡಲು ಯತ್ನಿಸುತ್ತಾರೆ. ಇದು ಅಗರಗಿಸಿಕೊಳ್ಳಲಾಗದಷ್ಟು ದುಃಖ ತರಿಸಿದೆ. ಅತ್ಯಾಚಾರ ಮಾಡುವ ಆ ಪುರುಷರ ಮನದಲ್ಲಿ ಯಾವ ಭಯವೂ ಇಲ್ಲವೇ? ಸಮಾಜದಿಂದ ಅಂತಹವರಿಗೆ ಹೇಗೆ ಭಯ ಹುಟ್ಟಿಸುವುದು ಮತ್ತು ನಮ್ಮ ಮಹಿಳೆಯರನ್ನು ಹೇಗೆ ರಕ್ಷಿಸುವುದು ಎಂದು ಬರೆದಿದ್ದಾರೆ.