ಕರ್ನಾಟಕ

karnataka

ETV Bharat / sitara

ಗರ್ಭಿಣಿಯಾಗಿದ್ರೂ ಶೂಟಿಂಗ್​ನಲ್ಲಿ ಭಾಗಿಯಾದ ಅನುಷ್ಕಾ - ಅನುಷ್ಕಾ ಶರ್ಮಾ ಸುದ್ದಿ

ಕ್ಯಾರವಾನ್​ ವಾಹನದಿಂದ ಶೂಟಿಂಗ್​ ಸೆಟ್​​ಗೆ ಎಂಟ್ರಿ ಆಗುತ್ತಿರುವ ಅನುಷ್ಕಾರ ಫೋಟೋಗಳು ಇದೀಗ ಎಲ್ಲೆಡೆ ಸಖತ್​ ವೈರಲ್​ ಆಗುತ್ತಿವೆ. ಮೂಲಗಳು ಹೇಳುವ ಹಾಗೆ ಅನುಷ್ಕಾ ಶರ್ಮಾ ಮುಂಬೈನಲ್ಲಿ ಜಾಹೀರಾತು ಒಂದರ ಚಿತ್ರೀರಣದಲ್ಲಿ ಭಾಗಿಯಾಗಿದ್ದಾರಂತೆ.

Anushka Sharma is pregnant and glowing as she steps out for an ad shoot in Mumbai
ಗರ್ಭಿಣಿಯಾಗಿದ್ರೂ ಶೂಟಿಂಗ್​ನಲ್ಲಿ ಭಾಗಿಯಾದ ಅನುಷ್ಕಾ

By

Published : Nov 22, 2020, 5:01 PM IST

Updated : Nov 22, 2020, 8:29 PM IST

ಬಾಲಿವುಡ್​​ ಬೆಡಗಿ ಅನುಷ್ಕಾ ಶರ್ಮಾ ಒಂದಿಲ್ಲೊಂದು ವಿಚಾರವಾಗಿ ಸುದ್ದಿ ಆಗ್ತಾನೆ ಇರ್ತಾರೆ. ಇದೀಗ ತಾವು ಗರ್ಭಿಣಿ ಆಗಿದ್ದರೂ ಶೂಟಿಂಗ್​ ಒಂದರಲ್ಲಿ ಭಾಗಿಯಾಗಿದ್ದು ಎಲ್ಲರ ಗಮನ ಸೆಳೆದಿದ್ದಾರೆ.

ಕ್ಯಾರವಾನ್​ ವಾಹನದಿಂದ ಶೂಟಿಂಗ್​ ಸೆಟ್​​ಗೆ ಎಂಟ್ರಿ ಆಗುತ್ತಿರುವ ಅನುಷ್ಕಾರ ಫೋಟೋಗಳು ಇದೀಗ ಎಲ್ಲೆಡೆ ಸಖತ್​ ವೈರಲ್​ ಆಗುತ್ತಿವೆ. ಮೂಲಗಳು ಹೇಳುವ ಹಾಗೆ ಅನುಷ್ಕಾ ಶರ್ಮಾ ಮುಂಬೈನಲ್ಲಿ ಜಾಹೀರಾತು ಒಂದರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರಂತೆ.

ಹಸಿರು ಬಣ್ಣದ ಉಡುಗೆ ತೊಟ್ಟು, ಮುಖಕ್ಕೆ ಮಾಸ್ಕ್​ ಧರಿಸಿರುವ ಅನುಷ್ಕಾ, ಶೂಟಿಂಗ್​ನಲ್ಲಿ ಭಾಗಿಯಾಗಿದ್ದಾರೆ. ತಮ್ಮ ಶೂಟಿಂಗ್​ ಬಗ್ಗೆ ಮಾತನಾಡಿರುವ ಅನುಷ್ಕಾ ಶರ್ಮಾ, ಬಹಳ ದಿನಗಳ ನಂತ್ರ ಸೆಟ್​​ಗೆ ಬಂದಿರುವುದಕ್ಕೆ ಉತ್ಸುಕಳಾಗಿದ್ದೇನೆ. ಇಲ್ಲಿ ನನಗೆ ಯಾವುದೇ ಆತಂಕ ಇಲ್ಲ. ಯಾಕಂದ್ರೆ ನಾನು ಎಲ್ಲಾ ರೀತಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇನೆ ಎಂದಿದ್ದಾರೆ. ಇನ್ನು ಶೂಟಿಂಗ್​ ಸೆಟ್​​ನಲ್ಲಿ ಇದ್ದವರು ಹೇಳಿದ ಪ್ರಕಾರ, ಅನಷ್ಕಾ ಶೂಟಿಂಗ್​ ಸೆಟ್​ ಮತ್ತು ಅಲ್ಲಿನ ಜನರನ್ನು ತುಂಬಾ ಮಿಸ್​ ಮಾಡಿಕೊಂಡಿದ್ದರಂತೆ.

ಇನ್ನು ಅನುಷ್ಕಾ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಫೋಟೋ ಒಂದನ್ನು ಹಾಕಿದ್ದು, ಕನ್ನಡಿಯ ಮುಂದೆ ಕುಳಿತು ಮೇಕಪ್​ ಮಾಡಿಸಿಕೊಳ್ಳುತ್ತಿರುವುದು ಕಂಡು ಬಂದಿದೆ. ಈ ಫೋಟೋ ಮೇಲೆ ಹಾಯ್​ ಎಂದು ಕ್ಯಾಪ್ಶನ್​ ಬರೆದಿದ್ದಾರೆ.

ಅನುಷ್ಕಾ ಶರ್ಮಾ

ಇತ್ತೀಚೆಗೆ ದುಬೈನಲ್ಲಿ ನಡೆದ ಐಪಿಎಲ್​​​ನಲ್ಲಿ ಪತಿ ವಿರಾಟ್​​​ ಕೊಹ್ಲಿಗೆ ಪ್ರೋತ್ಸಾಹ ನೀಡಲು ಅನುಷ್ಕಾ ಶರ್ಮಾ ತೆರಳಿದ್ದರು. ಅಲ್ಲಿಂದ ವಾಪಸ್ಸಾಗಿ ಶೂಟಿಂಗ್​ನಲ್ಲಿ ಭಾಗಿಯಾಗಿರುವುದು ಗಮನ ಸೆಳೆದಿದೆ.

ಅನುಷ್ಕಾ ಶರ್ಮಾ
ಅನುಷ್ಕಾ ಶರ್ಮಾ
Last Updated : Nov 22, 2020, 8:29 PM IST

ABOUT THE AUTHOR

...view details