ಕರ್ನಾಟಕ

karnataka

ETV Bharat / sitara

ವಿರುಷ್ಕಾ ಮನೆ ಪಕ್ಕದಲ್ಲೇ ವಿಕ್ಕಿ - ಕತ್ರಿನಾ ಮನೆ: ಬೇಗ ಬನ್ನಿ ಎಂದ ಅನುಷ್ಕಾ.. ಯಾಕೆ ಗೊತ್ತಾ..! - ಕತ್ರಿನಾ ಮತ್ತು ವಿಕ್ಕಿ ಮದುವೆ

ಅನುಷ್ಕಾ ಶರ್ಮಾ ಮತ್ತು ವಿರಾಟ್​ ಕೊಹ್ಲಿ ಇರುವ ಅಪಾರ್ಟ್ಮೆಂಟ್​ ಹತ್ತಿರ ನವ ದಂಪತಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಹೊಸ ಮನೆ ಬಾಡಿಗೆ ಪಡೆದಿದ್ದು, ಅಲ್ಲಿಯೇ ವಾಸವಾಗಲಿದ್ದಾರೆ ಎಂಬ ಊಹಾಪೋಹಗಳಿಗೆ ಕೊನೆಗೆ ವಿರುಷ್ಕಾ ತೆರೆ ಎಳೆದಿದ್ದಾರೆ.

anushka-sharma
ಅನುಷ್ಕಾ, ಕರ್ತಿನಾ

By

Published : Dec 10, 2021, 5:02 PM IST

Updated : Dec 10, 2021, 6:03 PM IST

ನವದೆಹಲಿ: ಹಲವಾರು ವದಂತಿಗಳ ನಂತರ, ನವ ದಂಪತಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ಹೊಸ ನೆರೆಹೊರೆಯವರು ಆಗಲಿದ್ದಾರೆ ಎಂದು ನಟಿ ಅನುಷ್ಕಾ ಶರ್ಮಾ ಅಂತಿಮವಾಗಿ ಖಚಿತಪಡಿಸಿದ್ದಾರೆ.

ಅನುಷ್ಕಾ ಪತಿ ವಿರಾಟ್ ಕೊಹ್ಲಿ ಮತ್ತು ಅವರ ಒಂದು ವರ್ಷದ ಮಗಳು ವಾಮಿಕಾ ವಾಸಿಸುತ್ತಿರುವ ಅಪಾರ್ಟ್ಮೆಂಟ್ ಹತ್ತಿರ ಕತ್ರಿನಾ ಮತ್ತು ವಿಕ್ಕಿ ಮನೆಯೊಂದನ್ನ ಬಾಡಿಗೆಗೆ ಪಡೆದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿತ್ತು.

ಅನುಷ್ಕಾ ಶರ್ಮಾ ಫೋಸ್ಟ್​​

ಅದಕ್ಕೆ ಪೂರಕ ಎಂಬತೆ ಅನುಷ್ಕಾ, ತಮ್ಮ ಇನ್ಟಾಗ್ರಾಮ್​ನಲ್ಲಿ 'ಅಂತಿಮವಾಗಿ ನೀವು ಮದುವೆಯಾದಿರಿ, ಈಗ ನೀವು ನಿಮ್ಮ ಮನೆಗೆ ಬರಬಹದು. ಇದರಿಂದ ನಾವು ನಿಮ್ಮ ಮನೆ ನಿರ್ಮಾಣದ ಶಬ್ದಗಳನ್ನು ಕೇಳುವುದನ್ನು ನಿಲ್ಲಿಸಬಹುದು' ಎಂದು ಬರೆದುಕೊಂಡಿದ್ದಾರೆ.

ಓದಿ-ಅದ್ಧೂರಿ ಮದುವೆ ನಂತ್ರ ಹೆಲಿಕಾಪ್ಟರ್​ ಏರಿದ ವಿಕ್ಕಿ-ಕತ್ರಿನಾ: ಪಯಣ ಹನಿಮೂನಿಗಾ..!?

ಕತ್ರಿನಾ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಅನುಷ್ಕಾ ಶರ್ಮಾ ನವದಂಪತಿಗೆ ವಿಶ್​ ಕೂಡಾ ಮಾಡಿದ್ದು, 'ಅಭಿನಂದನೆಗಳು ಸುಂದರ ಹೃದಯಗಳಿಗೆ.. ! ನಿಮ್ಮ ಜೀವನದುದ್ದಕ್ಕೂ ಪ್ರೀತಿ ಮತ್ತು ಬಾಂಧವ್ಯ ಉತ್ತಮವಾಗಿರಲಿ ಎಂದು ಬಯಸುತ್ತೇನೆ' ಎಂದು ಬರೆದು ತಮ್ಮ ಇನ್​​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಕತ್ರಿನಾ ಮತ್ತು ವಿಕ್ಕಿ ಮದುವೆಯ ಅಧಿಕೃತ ಚಿತ್ರಗಳನ್ನು ಹಂಚಿಕೊಂಡ ಕೂಡಲೇ, ಹಲವಾರು ಸೆಲೆಬ್ರಿಟಿಗಳು ಕಾಮೆಂಟ್‌ಗಳ ಮಾಡುವ ಮೂಲಕ ಸ್ಟಾರ್​ ದಂಪತಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಇನ್ನು ಕೆಲವು ತಾರೆಯರು ತಮ್ಮ ಸಾಮಾಜಿಕ ಮಾಧ್ಯಮ ವಿಶೇಷ ಟಿಪ್ಪಣಿಗಳೊಂದಿಗೆ ಅವರನ್ನು ಅಭಿನಂದಿಸಿದ್ದಾರೆ.

Last Updated : Dec 10, 2021, 6:03 PM IST

ABOUT THE AUTHOR

...view details