ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಪ್ರೆಗ್ನೆನ್ಸಿ ಫೋಟೋಗಳು ಸಖತ್ ವೈರಲ್ ಆಗುತ್ತಿದ್ದು, ಇದೀಗ ಮತ್ತೊಂದು ಚಿತ್ರವನ್ನು ನಟಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸೂರ್ಯನ ಕಿರಣಗಳು ಮುಖದ ಮೇಲೆ ಬೀಳುತ್ತಿರುವ ದೃಶ್ಯ ಇಲ್ಲಿ ಕಾಣಬಹುದು. ಇನ್ನು 'ಹೇ'(Hey) ಎಂದು ಶೀರ್ಷಿಕೆ ನೀಡಿದ ಅನುಷ್ಕಾ ಪೀಚ್ ಬಣ್ಣದ ಉಡುಪಿನಲ್ಲಿ ಮಿಂಚುತ್ತಿದ್ದಾರೆ.
ಸದ್ಯ ಈ ಫೋಟೋವನ್ನು ಚಲನಚಿತ್ರ ನಿರ್ಮಾಪಕ ಹೋಮಿ ಅದಜಾನಿಯಾ ಸೇರಿದಂತೆ ಸುಮಾರು 15 ಲಕ್ಷ ಅಭಿಮಾನಿಗಳು ಇಷ್ಟಪಟ್ಟು ಲೈಕ್ ಮಾಡಿದ್ದಾರೆ. ಇನ್ನು ಅನೇಕರು ಕಮೆಂಟ್ ಮೂಲಕ ತಮ್ಮ ಪ್ರೀತಿ ಹಂಚಿಕೊಂಡಿದ್ದಾರೆ.
ಇನ್ನು ಇತ್ತೀಚಿನ ದಿನಗಳಲ್ಲಿ ನಟಿ ಅನುಷ್ಕಾ, ಸಾಮಾಜಿಕ ಮಾಧ್ಯಮದ ಮೂಲಕ ಚಿತ್ರಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದು, ತನ್ನ ಚಟುವಟಿಕೆಗಳ ಬಗ್ಗೆ ಅಭಿಮಾನಿಗಳಿಗೆ ತಿಳಿಸುತ್ತಿದ್ದಾರೆ.