ಐಪಿಎಲ್ 2020ರ ಟ್ರೋಪಿ ಗೆಲ್ಲುವ ಕನಸು ಕಂಡಿದ್ದ ಆರ್ಸಿಬಿ ತಂಡ ಪ್ಲೇ ಆಫ್ ಪ್ರವೇಶಿಸಿ ಫೈನಲ್ ಪ್ರವೇಶದಲ್ಲಿ ಸೋಲುಂಡು ಮನೆಗೆ ಮರಳಿದೆ. ಐಪಿಎಲ್ ಗುಂಗಿನಿಂದ ಹೊರ ಬಂದಿರುವ ನಾಯಕ ಕೊಹ್ಲಿ ಇದೀಗ ಅಂತಾರಾಷ್ಟ್ರೀಯ ಪಂದ್ಯಗಳತ್ತ ಮುಖ ಮಾಡಿದ್ದಾರೆ.
ಶೂ ಕ್ಲೀನ್ ಮಾಡಿದ ವಿರಾಟ್ ಕೊಹ್ಲಿ : ಫೋಟೋ ಶೇರ್ ಮಾಡಿದ ಅನುಷ್ಕಾ ಏನಂದ್ರು? - Anushka Sharma Catches Virat Kohli 'Diligently Cleaning His Muddy Spikes' Before Australia Tour
ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ವಿರಾಟ್ ಕೊಹ್ಲಿ ಸಿದ್ದವಾಗುತ್ತಿದ್ದಾರೆ. ಇದಕ್ಕಾಗಿ ತಮ್ಮ ಶೂಗಳನ್ನು ಸಿಂಕ್ನಲ್ಲಿ ಶುಚಿ ಮಾಡುತ್ತಿದ್ದಾರೆ..
ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ವಿರಾಟ್ ಕೊಹ್ಲಿ ಸಿದ್ದವಾಗುತ್ತಿದ್ದಾರೆ. ಇದಕ್ಕಾಗಿ ತಮ್ಮ ಶೂಗಳನ್ನು ಸಿಂಕ್ನಲ್ಲಿ ಶುಚಿ ಮಾಡುತ್ತಿದ್ದಾರೆ. ಶೂ ಕ್ಲೀನ್ ಮಾಡುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿಕೊಂಡಿರುವ ಅನುಷ್ಕಾ ಶರ್ಮಾ, ನನ್ನ ಗಂಡ ಪ್ರವಾಸಕ್ಕೂ ಮುನ್ನ ಮಣ್ಣಾಗಿರುವ ಶೂ ಕ್ಲೀನ್ ಮಾಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಬಿಸಿಸಿಐ ಅನುಷ್ಕಾ ಶರ್ಮಾ ಮತ್ತು ಕೊಹ್ಲಿಗೆ ಸಿಹಿ ಸುದ್ದಿಯನ್ನು ನೀಡಿದ್ದು, ಆಷ್ಟ್ರೇಲಿಯಾದಲ್ಲಿ ನಡೆಯುವ ಮೊದಲ ಟೆಸ್ಟ್ ಪಂದ್ಯದ ನಂತರ ಪೆಟರ್ನಿಟಿ ಲೀವ್ ನೀಡಿದೆ. ಗರ್ಭಿಣಿಯಾಗಿರುವ ಅನುಷ್ಕಾ ಮುಂಬರುವ ಜನವರಿಯಲ್ಲಿ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ. ಇದೇ ಕಾರಣಕ್ಕೆ ಪತ್ನಿಯ ಆರೈಕೆಗೆಂದು ಬಿಸಿಸಿಐ ಕೊಹ್ಲಿಗೆ ಪಿತೃತ್ವ ರಜೆ ನೀಡಿದೆ.