ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಮದುವೆಯಾಗಿ ಇಂದಿಗೆ ಮೂರು ವಸಂತಗಳು ಕಳೆದಿದ್ದು, ಸ್ಟಾರ್ ಜೋಡಿ ವಿವಾಹ ವಾರ್ಷಿಕೋತ್ಸವದ ಸಡಗರದಲ್ಲಿದ್ದಾರೆ.
ಈ ಖುಷಿಯನ್ನು ಅವರಿಬ್ಬರು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸಂಭ್ರಮಿಸಿದ್ದಾರೆ. ಅನುಷ್ಕಾ ಶರ್ಮಾ ಫೋಟೋ ಒಂದನ್ನು ಶೇರ್ ಮಾಡಿದ್ದು, ಅದ್ರಲ್ಲಿ ಪತಿಯನ್ನು ಬಿಗಿದಪ್ಪಿದ್ದು, ಕೊಹ್ಲಿ ಆನಂದದಿಂದ ನಗುತ್ತಿದ್ದಾರೆ.
ಈ ಫೋಟೋವನ್ನು ಶೇರ್ ಮಾಡಿರುವ ಅನುಷ್ಕಾ, 'ನಾವು ಮದುವೆಯಾಗಿ ಮೂರು ವರ್ಷ. ಇನ್ನೇನು ಕೆಲವು ದಿನಗಳ ಬಳಿಕ ಇಬ್ಬರಿದ್ದವರು ಮೂವರಾಗುತ್ತಿದ್ದಾರೆ. ಮಿಸ್ ಯೂ' ಎಂದಿದ್ದಾರೆ.
ಓದಿ: 3 ವರ್ಷಗಳ ಹಿಂದಿನ ಹಳೆಯ ಸುಂದರ ವಿಡಿಯೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡ ಜಗನ್ನಾಥ್
ಸದ್ಯ ಆಸ್ಟ್ರೇಲಿಯಾದಲ್ಲಿರುವ ಕೊಹ್ಲಿ ಕೂಡ ತಮ್ಮ ಮದುವೆ ಸಂದರ್ಭದ ಫೋಟೋ ಹಂಚಿಕೊಂಡಿದ್ದು, ಮೂರು ವರ್ಷ ಕಳೆಯಿತು, ಜೀವನ ಪೂರ್ತಿ ಜೊತೆಯಾಗಿರೋಣ ಎಂದು ಬರೆದುಕೊಂಡಿದ್ದಾರೆ.
ಇವರಿಬ್ಬರ ವೃತ್ತಿ ಜೀವನದ ಬಗ್ಗೆ ನೋಡುವುದಾದರೆ, ಕೊಹ್ಲಿ ಇದೇ 17ರಿಂದ ಪ್ರಾರಂಭವಾಗುವ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಪಂದ್ಯಕ್ಕೆ ಸಿದ್ದರಾಗುತ್ತಿದ್ದಾರೆ. ಮೊದಲ ಟೆಸ್ಟ್ ಪಂದ್ಯ ಮುಗಿದ ಬಳಿಕ ಕೊಹ್ಲಿ ತವರಿಗೆ ವಾಪಸ್ಸಾಗಲಿದ್ದಾರೆ. ಗರ್ಭಿಣಿ ಅನುಷ್ಕಾ ಶರ್ಮಾ ತಮ್ಮ ಸಿನಿಮಾ ಕೆಲಸಗಳಿಗೆ ಬ್ರೇಕ್ ಕೊಟ್ಟು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.