ಕರ್ನಾಟಕ

karnataka

ETV Bharat / sitara

ನಾನು, ಅನುಷ್ಕಾ ಶೆಟ್ಟಿ ಬೆಸ್ಟ್​​ ಫ್ರೆಂಡ್ಸ್​ ಅಷ್ಟೆ... ಮತ್ತೆ ಅಭಿಮಾನಿಗಳ ಬಾಯಿ ಮುಚ್ಚಿಸಿದ ಪ್ರಭಾಸ್​​ - Darling, Mirchi and Baahubali series

ಬಾಹುಬಲಿ ಜೋಡಿ ಪ್ರಭಾಸ್, ಅನುಷ್ಕಾ ಶೆಟ್ಟಿ ಮದುವೆಯಾಗ್ತಾರೆ ಎಂದು ಹರಿದಾಡುತ್ತಿದ್ದ ಸುದ್ದಿಗೆ ಪ್ರಭಾಸ್​ ಸ್ಪಷ್ಟನೆ ಕೊಟ್ಟಿದ್ದಾರೆ. ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಎಂದು ತಿಳಿಸಿದ್ದಾರೆ.

Anushka and I are very good friends: clarify Prabhas

By

Published : Aug 17, 2019, 10:45 AM IST

Updated : Aug 17, 2019, 10:57 AM IST

ಬಾಹುಬಲಿ ಜೋಡಿ ಪ್ರಭಾಸ್, ಅನುಷ್ಕಾ ಶೆಟ್ಟಿ ಮದುವೆಯಾಗ್ತಾರೆ... ಅಮೆರಿಕದಲ್ಲಿ ಮನೆ ಖರೀದಿಸಿದ್ದಾರೆ ಎನ್ನುವ ಸುದ್ದಿ ಭಾರಿ ಸದ್ದು ಮಾಡಿತ್ತು. ಈ ಸುದ್ದಿ ದೇಶಾದ್ಯಂತ ಸಾಕಷ್ಟು ಚರ್ಚೆಯಾಗಿತ್ತು. ಆದರೆ, ಈ ಸಂಬಂಧವನ್ನು ಪ್ರಭಾಸ್ ನಿರಾಕರಿಸಿದ್ದು, ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಎಂದು ಅಭಿಮಾನಿಗಳ ಬಾಯಿ ಮುಚ್ಚಿಸಿದ್ದಾರೆ.

ಪ್ರಭಾಸ್​ ಮತ್ತು ಅನುಷ್ಕಾ ಶೆಟ್ಟಿ ಅವರನ್ನು ಡ್ರೀಮ್​ ಕಪಲ್​ ಎಂದೇ ಊಹಿಸಿಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆ ಮಾಡಿದ್ದಾರೆ. ಸಾಹೋ ಚಿತ್ರದ ಪ್ರಮೋಷನ್ಸ್​ ವೇಳೆ ಮುಂಬೈನಲ್ಲಿ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಈ ನಾನು ಮತ್ತು ಅನುಷ್ಕಾ ಶೆಟ್ಟಿ ತುಂಬಾ ಒಳ್ಳೆ ಸ್ನೇಹಿತರು ಎಂದು ಸ್ಪಷ್ಟಪಡಿಸಿದ್ದಾರೆ.

ಬಾಹುಬಲಿ ಸಿನಿಮಾ ಮುಗಿದ ಬಳಿಕ ನಾನು ಅನುಷ್ಕಾರನ್ನು ಭೇಟಿಯಾಗಲೇ ಇಲ್ಲ. ಹಾಗಾದರೆ ನಾವಿಬ್ಬರೂ ಜೊತೆಯಲ್ಲೇ ಕಾಣಿಸಕೊಳ್ಳಬೇಕಾಗಿತ್ತಲ್ಲವೇ? ನಾವಿಬ್ಬರೂ ಭೇಟಿಯಾಗಿ ಎರಡು ವರ್ಷವಾಗಿದೆ. ಈ ಬಗ್ಗೆ ಕರುಣ್​ ಜೋಹಾರ್​ ಕೂಡ ಕೇಳಿದ್ದರು. ಆಗ ರಾಣಾ, ರಾಜಮೌಳಿ, ನಮ್ಮಿಬ್ಬರ ಮಧ್ಯೆ ಏನಿಲ್ಲ ಎಂಬುದನ್ನು ತಿಳಿಸಿದ್ದಾರೆ. ಮದುವೆಯಾಗ್ತೇವೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದ್ದಾರೆ.

ಪ್ರಭಾಸ್​ ಮತ್ತು ಅನುಷ್ಕಾ ಒಟ್ಟಿಗೆ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಡಾರ್ಲಿಂಗ್​, ಮಿರ್ಚಿ ಮತ್ತು ಬಾಹುಬಲಿ ಎರಡು ಭಾಗಗಳಲ್ಲಿ ಈ ಜೋಡಿ ಮಿಂಚಿದೆ. ಅಲ್ಲದೆ, ಎಲ್ಲ ಚಿತ್ರಗಳಲ್ಲೂ ಅವರ ಕೆಮಿಸ್ಟ್ರಿ ಅದ್ಭುತವಾಗಿ ವರ್ಕೌಟ್​ ಆಗಿದೆ. ಆದ್ದರಿಂದ ಇವರಿಬ್ಬರೂ ಪ್ರೀತಿಸುತ್ತಿದ್ದು, ಮದುವೆಯಾಗಲಿದ್ದಾರೆ ಎಂದು ರೂಮರ್ಸ್ ಹಬ್ಬಿತ್ತು.

ಪ್ರಭಾಸ್​ 'ಸಾಹೋ' ಚಿತ್ರದ ಪ್ರಮೋಷನ್ಸ್​ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ಸುಜೀತ್​ ನಿರ್ದೇಶಿಸಿದ್ದು, ಇದೇ ಮೊದಲ ಬಾರಿಗೆ ಬಾಲಿವುಡ್​ ನಟಿ ಶ್ರದ್ಧಾ ಕಪೂರ್​ ತೆಲುಗಿಗೆ ಕಾಲಿಟ್ಟಿದ್ದಾರೆ. ಇತ್ತ ಅನುಷ್ಕಾ 'ನಿಶಬ್ದಂ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹೇಮಂತ್​ ಮಧುಕರ್​ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Last Updated : Aug 17, 2019, 10:57 AM IST

ABOUT THE AUTHOR

...view details