ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ ಧಾರಾವಾಹಿಯ ರಾಧಿಕಾ ಅಭಿನಯಕ್ಕೆ ಮನ ಸೋಲದವರಿಲ್ಲ. ಅವಳ ಕಷ್ಟಕ್ಕೆ ಮರುಗದವರಿಲ್ಲ. ರಾಧಿಕಾ ಪಾತ್ರಧಾರಿಯಾಗಿ ಕಿರುತೆರೆ ಪ್ರಿಯರ ಮನ ಗೆದ್ದ ಆ ಚೆಲುವೆ ಹೆಸರು ಅನುಷಾ ರಾವ್. 'ಸುಬ್ಬಲಕ್ಷ್ಮಿ ಸಂಸಾರ' ಧಾರಾವಾಹಿಯಲ್ಲಿ ನಾಯಕಿ ಸುಬ್ಬಲಕ್ಷ್ಮಿ ಗೆಳತಿ ರೇವತಿಯಾಗಿ ಅನುಷಾ ಕಾಣಿಸಿಕೊಂಡಿದ್ದರು.
ಕಿರುತೆರೆಯಿಂದ ಸಿನಿಮಾವರೆಗೂ ರಾಧಿಕಾ ಅಲಿಯಾಸ್ ಅನುಷಾ ರಾವ್ - ಮನರೂಪ ಸಿನಿಮಾದಿಂದ ಅನುಷಾ ರಾವ್ ಸಿನಿಕರಿಯರ್ ಆರಂಭ
ಅನುಷಾ ರಾವ್ ಬೆಳ್ಳಿ ತೆರೆಯಲ್ಲೂ ಕೂಡಾ ಸದ್ದು ಮಾಡುತ್ತಿದ್ದಾರೆ. ಕಿರಣ್ ಹೆಗ್ಡೆ ನಿರ್ದೇಶನದ 'ಮನರೂಪ' ಎಂಬ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ಅನುಷಾ ರಾವ್ ಅಭಿನಯಿಸಿದ್ದು, ಇಡೀ ಸಿನಿಮಾ ರಂಗದಲ್ಲಿ ಈ ಚಿತ್ರ ಹೊಸ ಸಂಚಲನ ಮೂಡಿಸಲಿದೆ ಎನ್ನುತ್ತಾರೆ ಅನುಷಾ.
![ಕಿರುತೆರೆಯಿಂದ ಸಿನಿಮಾವರೆಗೂ ರಾಧಿಕಾ ಅಲಿಯಾಸ್ ಅನುಷಾ ರಾವ್](https://etvbharatimages.akamaized.net/etvbharat/prod-images/768-512-5120077-thumbnail-3x2-anusharao.jpg)
ಇದೀಗ ಅನುಷಾ ರಾವ್ ಬೆಳ್ಳಿ ತೆರೆಯಲ್ಲೂ ಕೂಡಾ ಸದ್ದು ಮಾಡುತ್ತಿದ್ದಾರೆ. ಕಿರಣ್ ಹೆಗ್ಡೆ ನಿರ್ದೇಶನದ 'ಮನರೂಪ' ಎಂಬ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ಅನುಷಾ ರಾವ್ ಅಭಿನಯಿಸಿದ್ದು, ಇಡೀ ಸಿನಿಮಾ ರಂಗದಲ್ಲಿ ಈ ಚಿತ್ರ ಹೊಸ ಸಂಚಲನ ಮೂಡಿಸಲಿದೆ ಎನ್ನುತ್ತಾರೆ ಅನುಷಾ. 'ನಿರ್ದೇಶಕ ಕಿರಣ್ ಹೆಗ್ಡೆ ಅವರು ಕಥೆ ಹೇಳಿದಾಗಲೇ ನಾನು ಕಥೆಯನ್ನು ಬಹಳ ಇಷ್ಟಪಟ್ಟೆ. ಕಥೆಯ ಹಂದರವೇ ನನಗೆ ತುಂಬಾ ಹಿಡಿಸಿಬಿಟ್ಟಿತ್ತು. ಆ ಕಥೆಯಲ್ಲಿ ತಾಜಾತನ ಇತ್ತು. ಅದೇ ಕಾರಣಕ್ಕೆ ನಾನು ಈ ಚಿತ್ರವನ್ನು ಒಪ್ಪಿಕೊಂಡೆ. ಜೊತೆಗೆ ಈ ಚಿತ್ರದ ನಂತರ ಇನ್ನು ಮುಂದೆ ಸಾಕಷ್ಟು ಅವಕಾಶಗಳು ಬಂದರೂ ಬರಬಹುದು' ಎಂದು ನಗುತ್ತಾ ಹೇಳುತ್ತಾರೆ ಅನುಷಾ ರಾವ್. ನಟಿಯಾಗಿ ಗುರುತಿಸಿಕೊಂಡಿರುವ ಅನುಷಾ ಅವರಿಗೆ ಒಂದೇ ರೀತಿಯ ಪಾತ್ರಗಳಿಗೆ ಬ್ರ್ಯಾಂಡ್ ಆಗುವ ಮನಸ್ಸಿಲ್ಲ. ಬದಲಿಗೆ ಬೇರೆ ಬೇರೆ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಬಯಕೆ ಇದೆ. ಇದೀಗ 'ಮನರೂಪ' ಸಿನಿಮಾದಲ್ಲಿ ನಟಿಸುವ ಮೂಲಕ ಹೊಸ ಪಾತ್ರದಲ್ಲಿ ನಟಿಸಿದ ಸಂತಸ ಅವರಿಗಿದೆ.
'ಮನರೂಪ' ಟ್ರೇಲರ್ ಕೂಡಾ ಈಗಾಗಲೇ ಬಿಡುಗಡೆಯಾಗಿದ್ದು, ಭಾರೀ ಕುತೂಹಲ ಹುಟ್ಟಿಸಿದೆ. ಈ ಸೈಕಲಾಜಿಕಲ್ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾವನ್ನು ಕಿರಣ್ ಹೆಗ್ಡೆ ಕಥೆ ಬರೆದು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಅನುಷಾ ರಾವ್ ಜೊತೆಗೆ ದಿಲೀಪ್ ಕುಮಾರ್, ನಿಷಾ, ಆರ್ಯನ್, ಶಿವಪ್ರಸಾದ್, ಅಮೋಘ್ ಸಿದ್ದಾರ್ಥ್ ಹಾಗೂ ಇನ್ನಿತರರು ನಟಿಸಿದ್ದಾರೆ. ನವೆಂಬರ್ 22ರಂದು ಸಿನಿಮಾ ಬಿಡುಗಡೆಯಾಗಲಿದೆ.