ಸ್ಯಾಂಡಲ್ವುಡ್ ಅಂಗಳದಲ್ಲಿ ಹೊಸಬರ ಆಗಮನ ಹೆಚ್ಚಾಗಿದೆ. ಅದರಲ್ಲೂ ಹೊಸಬರು ಪ್ರೀತಿ, ಪ್ರೇಮದ ಕಥೆಗಳನ್ನು ಮಾಡಿ ಗೆಲ್ಲುವ ದಾರಿ ಹುಡುಕುತ್ತಿದ್ದಾರೆ. ಇದೀಗ ಎರಡು ಹೊಸ ಪ್ರತಿಭೆಗಳು ನಟಿಸುತ್ತಿರುವ ಮತ್ತೊಂದು ಚಿತ್ರ ರೆಡಿಯಾಗುತ್ತಿದೆ.
'ಅಂದವಾದ' ಟೈಟಲ್ ಸಾಂಗ್ ರಿವೀಲ್... ಬಣ್ಣ ಹಚ್ಚಿರೋದು ಆಶಿಕಾ ರಂಗನಾಥ್ ಸಹೋದರಿ - undefined
ಅನುಷಾ ರಂಗನಾಥ್ ಹಾಗೂ ಜೈ ಎಂಬ ಹೊಸ ಪ್ರತಿಭೆಗಳು ನಟಿಸುತ್ತಿರುವ 'ಅಂದವಾದ' ಸಿನಿಮಾದ ಟೈಟಲ್ ಸಾಂಗ್ ಬಿಡುಗಡೆಯಾಗಿದೆ. ಚಲ ಎಂಬ ನಿರ್ದೇಶಕ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.

ಶರಣ್ ಜೊತೆ 'ರ್‍ಯಾಂಬೋ', ಅಜಯ್ ರಾವ್ ಜೊತೆಗೆ 'ತಾಯಿಗೆ ತಕ್ಕ ಸಿನಿಮಾ' ಸಿನಿಮಾಗಳಲ್ಲಿ ನಟಿಸಿದ್ದ ಆಶಿಕಾ ರಂಗನಾಥ್ ನಿಮಗೆಲ್ಲಾ ಗೊತ್ತು. ಇದೀಗ ಅವರ ಸಹೋದರಿ ಅನುಷಾ ರಂಗನಾಥ್ ಕೂಡಾ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದಾರೆ. ಈಗಾಗಲೇ ಅವರು ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಅವರು 'ಅಂದವಾದ' ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಜೈ ಎಂಬ ನಾಯಕ ಚಂದನವನಕ್ಕೆ ಎಂಟ್ರಿ ನೀಡಿದ್ದಾರೆ.
'ಅಂದವಾದ' ಚಿತ್ರಕ್ಕೆ ಚಲ ಎಂಬುವವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ವಿಕ್ರಮ್ ವರ್ಮನ್ ಈ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಚಿತ್ರತಂಡ ಈಗಾಗಲೇ ಎರಡು ಲಿರಿಕಲ್ ವಿಡಿಯೋ ಹಾಡುಗಳನ್ನು ರಿವೀಲ್ ಮಾಡಿದೆ. ಇದೀಗ ಟೈಟಲ್ ಸಾಂಗ್ ಕೂಡಾ ಬಿಡುಗಡೆ ಆಗಿದೆ. ಅನುಷಾ ಮತ್ತು ಜೈ ಕೆಮಿಸ್ಟ್ರಿ ಈ ಹಾಡಿನ ಹೈಲೈಟ್ಗಳಲ್ಲಿ ಒಂದಾಗಿದೆ. ಕರ್ನಾಟಕದ ಕೆಲವೊಂದು ರಮಣೀಯ ತಾಣಗಳಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ.