ಸೀರಿಯಲ್ ನಟ ನಟಿಯರಿಗೆ ಇದೀಗ ಕಂಕಣ ಭಾಗ್ಯ ಕೂಡಿ ಬರುತ್ತಿದೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ರಾಧಾ ರಮಣ’ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಅನುಷಾ ಹೆಗ್ಡೆ ಹಸೆಮಣೆ ಏರಲು ಸಿದ್ಧರಾಗಿದ್ದಾರೆ.
ಅನುಷಾ ಹೆಗ್ಡೆ ರಾಧ ರಮಣ ಧಾರವಾಹಿಯಲ್ಲಿ ದೀಪಿಕಾ ಪಾತ್ರಧಾರಿಯಾಗಿ ನಟಿಸಿದ್ದರು. ಇದೀಗ ತೆಲುಗು ಕಿರುತೆರೆ ನಟ ಪ್ರತಾಪ್ ಸಿಂಗ್ ಶಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ.
‘ರಾಧಾ ರಮಣ’ ಧಾರಾವಾಹಿ ಮುಗಿದ ಮೇಲೆ ತೆಲುಗಿನ ‘ನಿನ್ನೆ ಪೆಳ್ಳಾಡಟ’ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ತೆಲುಗಿನ ಖಾಸಗಿ ವಾಹಿನಿಯಲ್ಲಿ ಅವಾರ್ಡ್ ಕಾರ್ಯಕ್ರಮ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಗ್ ಶಾ ಅವಾರ್ಡ್ ಸ್ವೀಕರಿಸಿದ ಬಳಿಕ ಅನುಷಾ ಬೆರಳಿಗೆ ಉಂಗುರ ತೊಡಿಸಿ ಪ್ರಪೋಸ್ ಮಾಡಿದ್ದರು.
ಪ್ರತಾಪ್‍ರನ್ನು ಮದುವೆಯಾಗುವ ಮೂಲಕ ಮಂಗಳೂರಿನ ಬೆಡಗಿ ಅನುಷಾ ಹೈದರಾಬಾದ್‍ನ ರಜಪೂತ ಮನೆತನದ ಸೊಸೆ ಆಗಲಿದ್ದಾರೆ. ಪ್ರತಾಪ್ ಸಿಂಗ್ ತೆಲುಗು ಕಿರುತೆರೆಯಲ್ಲಿ ಸ್ಟಾರ್ ನಟನಾಗಿದ್ದು, ‘ನಿನ್ನೆ ಪೆಳ್ಳಾಡಟ’ ಧಾರಾವಾಹಿಯಲ್ಲಿ ನಟಿಸುವಾಗ ಇಬ್ಬರು ಪ್ರೀತಿಸಲು ಶುರು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ತೆಲುಗು ನಟನೊಂದಿದೆ ಹಸೆಮಣೆ ಏರಲಿದ್ದಾಳೆ 'ರಾಧ ರಮಣ' ಬೆಡಗಿ