ಕರ್ನಾಟಕ

karnataka

ETV Bharat / sitara

ದೇಶದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಟಿವಿ ನಟಿ ರೂಪಾಲಿ ಗಂಗೂಲಿ ; ದಿನವೊಂದಕ್ಕೆ₹__ಲಕ್ಷ! - ಅನುಪಮಾ ಖ್ಯಾತಿಯ ನಟಿ ರೂಪಾಲಿ ಗಂಗೂಲಿ

ಸದ್ಯ ಅವರು ನಟಿಸುತ್ತಿರುವ 'ಅನುಪಮಾ' ಧಾರಾವಾಹಿ ಕೆಲ ದಿನಗಳಿಂದ ಟಿಆರ್​ಪಿ ರೇಟಿಂಗ್​ನಲ್ಲಿ ರಾರಾಜಿಸುತ್ತಿದ್ದು, ಅದರಂತೆ ತಮ್ಮ ಸಂಭಾವನೆಯನ್ನ ಸಹ ಹೆಚ್ಚಿಸಿಕೊಂಡಿದ್ದಾರಂತೆ. ದಿನವೊಂದಕ್ಕೆ ಮೂರು ಲಕ್ಷ ತೆಗೆದುಕೊಳ್ಳುತ್ತಿರುವುದಾಗಿ ಕಿರುತೆರೆ ಬಳಗ ಮಾತನಾಡಿಕೊಳ್ಳುತ್ತಿದೆ..

ANUPAMA SERIAL ACTRESS RUPALI GANGULY REMUNERATION
ANUPAMA SERIAL ACTRESS RUPALI GANGULY REMUNERATION

By

Published : Feb 1, 2022, 4:49 PM IST

ಖ್ಯಾತ ಕಿರುತೆರೆ ನಟಿ ರೂಪಾಲಿ ಗಂಗೂಲಿ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಮೂಲಕ ಅವರು ದೇಶದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಕಿರುತೆರೆ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೆ, ನಟಿಯಿಂದ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

ಹಿಂದಿ ಧಾರಾವಾಹಿ ನೋಡುವವರಿಗೆ ರೂಪಾಲಿ ಗಂಗೂಲಿ ಯಾರೂ ಅನ್ನೋದರ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ತಮ್ಮ ಆಕರ್ಷಕ ಅಭಿನಯಿಂದಲೇ ರೂಪಾಲಿ ಎಲ್ಲರ ಮನೆಮಾತಾಗಿದ್ದು ಅವರ ಸಂಭಾವನೆ ಬಗ್ಗೆ ನೆಟ್‌ಫ್ಲಿಕ್ಸ್‌ನಲ್ಲಿ ಕುತೂಹಲಕಾರಿಯಾದ ಸುದ್ದಿಯೊಂದು ಹರಿದಾಡುತ್ತಿದೆ.

ಇದನ್ನೂ ಓದಿ:ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಕೆಜಿಎಫ್​​​-2 ಚಿತ್ರತಂಡ ಭೇಟಿ: ವಿಶೇಷ ಪೂಜೆ ಸಲ್ಲಿಸಿದ ಯಶ್​

ದೇಶದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಕಿರುತೆರೆ ನಟಿಯರು ಯಾರು ಎಂಬ ಸುದ್ದಿ ಹರಿದಾಡುತ್ತಿದ್ದು, ಅದರಲ್ಲಿ ರೂಪಾಲಿ ಗಂಗೂಲಿ ಅವರ ಹೆಸರು ಮೊದಲಿಗೆ ಕೇಳಿ ಬರುತ್ತಿದೆ. ನಟಿ ರೂಪಾಲಿ ಈ ಮೊದಲು ದಿನವೊಂದಕ್ಕೆ ಒಂದೂವರೆ ಲಕ್ಷ ರೂ. ಸಂಭಾವನೆ ತೆಗೆದುಕೊಳ್ಳುತ್ತಿದ್ದರಂತೆ.

ಸದ್ಯ ಅವರು ನಟಿಸುತ್ತಿರುವ 'ಅನುಪಮಾ' ಧಾರಾವಾಹಿ ಕೆಲ ದಿನಗಳಿಂದ ಟಿಆರ್​ಪಿ ರೇಟಿಂಗ್​ನಲ್ಲಿ ರಾರಾಜಿಸುತ್ತಿದ್ದು, ಅದರಂತೆ ತಮ್ಮ ಸಂಭಾವನೆಯನ್ನ ಸಹ ಹೆಚ್ಚಿಸಿಕೊಂಡಿದ್ದಾರಂತೆ. ದಿನವೊಂದಕ್ಕೆ ಮೂರು ಲಕ್ಷ ತೆಗೆದುಕೊಳ್ಳುತ್ತಿರುವುದಾಗಿ ಕಿರುತೆರೆ ಬಳಗ ಮಾತನಾಡಿಕೊಳ್ಳುತ್ತಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಪತಿಯ ವಿವಾಹೇತರ ಸಂಬಂಧದಿಂದ ಖಿನ್ನತೆಗೆ ಒಳಗಾದ ಗೃಹಿಣಿಯೊಬ್ಬಳು ತನ್ನ ಕಾಲ ಮೇಲೆ ಹೇಗೆ ನಿಂತುಕೊಳ್ಳುತ್ತಾಳೆ ಎಂಬುದೇ 'ಅನುಪಮಾ' ಧಾರಾವಾಹಿ ಕಥಾ ಹಂದರವಾಗಿದೆ. ಸದ್ಯ ಈ ಧಾರಾವಾಹಿ ಜನಪ್ರಿಯತೆ ಗಳಿಸುವಲ್ಲಿ ಮುಂದಿದೆ.

ABOUT THE AUTHOR

...view details