ಕನ್ನಡ ಕೋಗಿಲೆ, ಮಜಾ ಭಾರತ ಶೋಗಳನ್ನು ನಿರೂಪಿಸಿರುವ ಅನುಪಮಾ ಗೌಡ ಈಗ ಮರಳಿ ನಿರೂಪಣೆಗೆ ಬಂದಿದ್ದಾರೆ. ಈ ಬಾರಿ ರಿಯಲ್ ಲೈಫ್ ದಂಪತಿಗಳಿಗೆ ಗೇಮ್ ಶೋ ನಡೆಸಿಕೊಡಲಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ರಿಯಾಲಿಟಿ ಶೋ 'ರಾಜರಾಣಿ'ಯ ನಿರೂಪಕಿಯಾಗಿ ಅನುಪಮಾ ಕಿರುತೆರೆಗೆ ಕಾಲಿಡಲಿದ್ದಾರೆ.
ಸದ್ಯ ಈ ಶೋ ಬರಲಿದ್ದು, ನೇಹಾ ರಾಮಕೃಷ್ಣ, ಚಂದನ್ ಗೌಡ, ನಿವೇದಿತಾ ಗೌಡ, ಚಂದನ್ ಶೆಟ್ಟಿ ದಂಪತಿಗಳು ಸೇರಿದಂತೆ 12 ಸೆಲೆಬ್ರಿಟಿ ದಂಪತಿಗಳು ಇದರಲ್ಲಿ ಭಾಗವಹಿಸಲಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅನುಪಮಾ ಗೌಡ, 'ನಾನು ಒಂದೂವರೆ ವರ್ಷದ ನಂತರ ಸೆಟ್ಗೆ ಬಂದಿದ್ದೇನೆ. ನನ್ನ ಮೊದಲಿನ ಶೋಗಳು ಇದಕ್ಕಿಂತ ವಿಭಿನ್ನವಾಗಿದ್ದವು. ಕನ್ನಡ ಕೋಗಿಲೆ ಸಂಗೀತ ಶೋ ಹಾಗೂ ಮಜಾ ಭಾರತ ಶೋ ಕಾಮಿಡಿ ಒಳಗೊಂಡಿತ್ತು. ಎರಡು ಶೋಗಳು ತೀರ್ಪುಗಾರರನ್ನು ಒಳಗೊಂಡಿದ್ದವು. ಹೀಗಾಗಿ, ನನ್ನ ಪಾತ್ರ ಮಿತಿ ಹೊಂದಿತ್ತು. ರಾಜರಾಣಿ ಶೋ ಗೇಮ್ ಮೂಲಕ ಜೋಡಿಗಳ ಸಂಬಂಧವನ್ನು ಪ್ರದರ್ಶಿಸುತ್ತದೆ. ನಾನು ಶೋನ ಜವಾಬ್ದಾರಿ ಹೊಂದಿದ್ದೇನೆ. ಈಗಾಗಲೇ ಶೋನ ಮೊದಲು ಸಂಚಿಕೆ ಶೂಟಿಂಗ್ ಆಗಿದೆ. ಇದು ಸವಾಲಿನಿಂದ ಕೂಡಿತ್ತು. ನಾನು ಅವರ ಕೆಮಿಸ್ಟ್ರಿಯನ್ನು ಅರ್ಥ ಮಾಡಿಕೊಳ್ಳಬೇಕಿದೆ. ಗೇಮ್ ಮಾತ್ರವಲ್ಲದೇ ಜೋಡಿಗಳು ತಮ್ಮ ಬಗ್ಗೆ ತಿಳಿಯದ ವಿಷಯಗಳನ್ನು ಬಿಚ್ಚಿಡುತ್ತಾರೆ' ಎಂದಿದ್ದಾರೆ.
ಸದ್ಯ ಹಿರಿತೆರೆಯಲ್ಲಿ ಬ್ಯುಸಿಯಾಗಿರುವ ಅನುಪಮಾ ಗೌಡ, ಬರೋಬ್ಬರಿ ಒಂದೂವರೆ ವರ್ಷಗಳ ಸುದೀರ್ಘ ಗ್ಯಾಪ್ನ ನಂತರ ಮತ್ತೆ ಕಿರುತೆರೆಗೆ ಮರಳಿದ್ದು, ನಿರೂಪಕಿಯಾಗಿ ಮತ್ತೆ ಕಿರುತೆರೆ ವೀಕ್ಷಕರಿಗೆ ಮನರಂಜನೆ ಉಣಬಡಿಸಲು ತಯಾರಾಗಿದ್ದಾರೆ.
ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಮತ್ತೆ ಚಪಾತಿ ಸದ್ದು: ಪ್ರಶಾಂತ್-ಅರವಿಂದ್ ಟಾಕ್ವಾರ್