ಮುಂಬೈ: ಬಾಲಿವುಡ್ ಲೋಕದ ಹಿರಿಯ ನಟ ಅನುಪಮ್ ಖೇರ್ ಅವರ ತಾಯಿ ದುಲಾರಿ ಖೇರ್ ಅವರಿಗೆ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದಿದ್ದು, ಅವರನ್ನು ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ತಾಯಿ, ಸಹೋದರನಿಗೆ ಸೋಂಕು - ದುಲಾರಿ ಖೇರ್ಗೆ ಕೋವಿಡ್ 19 ಪಾಸಿಟಿವ್
ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್ ತಾಯಿ ದುಲಾರಿ ಖೇರ್ ಹಾಗೂ ಕುಟುಂಬದ ಇತರೆ ಮೂವರು ಸದಸ್ಯರಿಗೆ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ.
ಅನುಪಮ್ ಖೇರ್ ತಾಯಿಗೆ ಕೋವಿಡ್ 19
ನಟನ ಸಹೋದರ ರಾಜು ಖೇರ್ ಮತ್ತು ಅವರ ಕುಟುಂಬದವರಿಗೂ ಕೂಡ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ ಎಂದು ತಿಳಿದುಬಂದಿದೆ. ಆದರೆ ಅನುಪಮ್ ಅವರ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಹೋದರ ಮತ್ತು ಕುಟುಂಬ ಸದಸ್ಯರು ಸ್ವತಃ ಹೋಮ್ ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ಭಾನುವಾರ ಬೆಳಗ್ಗೆ ಟ್ವಿಟರ್ ಮೂಲಕ ಖೇರ್ ಈ ವಿಷಯವನ್ನು ತಿಳಿಸಿದ್ದಾರೆ. ತಮ್ಮ ತಾಯಿಯ ಜೊತೆಗೆ ಸಹೋದರ ಮತ್ತು ಕುಟುಂಬದ ಸದಸ್ಯರಿಗೆ ಸೋಂಕು ಕಾಣಿಸಿಕೊಂಡಿದೆ. ತಮಗೆ ನೆಗೆಟಿವ್ ವರದಿ ಬಂದಿದೆ ಎಂದು 65 ವರ್ಷದ ನಟ ಹೇಳಿದ್ದಾರೆ.