ಬಾಲಿವುಡ್‌ನ ಖ್ಯಾತ ನಟ ಅನುಪಮ್ ಖೇರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 66ನೇ ವಸಂತಕ್ಕೆ ಕಾಲಿಟ್ಟಿರುವ ಹಿರಿಯ ನಟ ತಮ್ಮ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.
ಹುಟ್ಟಿದ ದಿನವೇ ಎಲ್ಲರಿಗೂ ಧನ್ಯವಾದ ತಿಳಿಸಿ ಕಾರಣ ಕೊಟ್ಟರು ಅನುಪಮ್ ಖೇರ್ - ಅನುಪಮ್ ಖೇರ್
ಇಂದು ನನ್ನ ಹುಟ್ಟುಹಬ್ಬ. ಈ ದಿನವನ್ನು ನನ್ನ ಜೀವನದ ಪ್ರಮುಖ ವ್ಯಕ್ತಿಗಳಿಗೆ ಧನ್ಯವಾದ ತಿಳಿಸುತ್ತಾ ಆಚರಿಸುತ್ತೇನೆ ಎಂದು ಖ್ಯಾತ ಬಾಲಿವುಡ್ ನಟ ಅನುಪಮ್ ಖೇರ್ ತಿಳಿಸಿದ್ದಾರೆ.
ಹುಟ್ಟಿದ ದಿನವೇ ಎಲ್ಲರಿಗೂ ಧನ್ಯವಾದ ತಿಳಿಸಿ ಕಾರಣ ಕೊಟ್ಟ ಅನುಪಮ್ ಖೇರ್
ಈ ವಿಡಿಯೋದಲ್ಲಿ ಮಾತನಾಡಿರುವ ಅವರು, ನನ್ನನ್ನು ಈ ರೀತಿ ಕಾಪಾಡುತ್ತಿರುವುದಕ್ಕೆ ದೇವರಿಗೆ ಧನ್ಯವಾದ. ಜೀವನ ಮೌಲ್ಯಗಳ ಬಗ್ಗೆ ತಿಳಿಸಿದ್ದಕ್ಕೆ ನನ್ನ ಪೋಷಕರಿಗೆ ಮತ್ತು ಹಿರಿಯರಿಗೆ ಧನ್ಯವಾದ. ಜ್ಞಾನದ ಅರಿವು ಮೂಡಿಸಿದ್ದಕ್ಕೆ ಶಿಕ್ಷಕರಿಗೆ ಧನ್ಯವಾದ. ಸ್ನೇಹಿತರಿಗೆ ಸ್ನೇಹ ಕೊಟ್ಟಿದ್ದಕ್ಕಾಗಿ ಧನ್ಯವಾದ. ನನ್ನ ನಿರ್ದೇಶಕರಿಗೆ, ನಿರ್ಮಾಪಕರಿಗೆ ಮತ್ತು ಅಭಿಮಾನಿಗಳಿಗೆ ಧನ್ಯವಾದ ಎಂದು ಅನುಪಮ್ ಖೇರ್ ಹೇಳಿದ್ದಾರೆ.