ಕರ್ನಾಟಕ

karnataka

ETV Bharat / sitara

ಸುಶಾಂತ್​ ಜತೆಗಿನ ಬಾಂಧವ್ಯ ನೆನಪಿಸಿಕೊಂಡ ಅನುಪಮ್​ ಖೇರ್​ - ಮುಂಬೈ

ಸುಶಾಂತ್​ ಸಿಂಗ್​ ರಜಪೂತ್​ ಜೊತೆಗಿನ ಒಡನಾಟದ ಕುರಿತು ಹಿರಿಯ ನಟ ಅನುಪಮ್​ ಖೇರ್​ ಅವರು ವಿಡಿಯೋ ಒಂದನ್ನು ಶೇರ್​ ಮಾಡಿದ್ದಾರೆ.

ಹಿರಿಯ ನಟ ಅನುಪಮ್​ ಖೇರ್
ಹಿರಿಯ ನಟ ಅನುಪಮ್​ ಖೇರ್

By

Published : Jun 15, 2020, 7:45 AM IST

ಮುಂಬೈ: ಬಾಲಿವುಡ್​ ಹಿರಿಯ ನಟ ಅನುಪಮ್​ ಖೇರ್​ ಅವರು ಸುಶಾಂತ್​ ಸಿಂಗ್​ ರಜಪೂತ್​ ಸಾವಿಗೆ ಸಂತಾಪ ಸೂಚಿಸಿದ್ದು, ಇವರಿಬ್ಬರ ಮಧ್ಯೆ ಇದ್ದ ಬಾಂಧವ್ಯವನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ.

ಖೇರ್ ಅವರು ಇನ್ಸ್​ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಶೇರ್​ ಮಾಡಿದ್ದು, ಸುಶಾಂತ್​ ಜೊತೆಗಿನ ಒಡನಾಟದ ಕುರಿತು ತಿಳಿಸಿದ್ದಾರೆ. ಎಂ.ಎಸ್​. ಧೋನಿ ಸಿನಿಮಾದ ಸಂದರ್ಭದಲ್ಲಿ ಅನುಪಮ್​ ಖೇರ್​-ಸುಶಾಂತ್​ ತಂದೆ ಮಗನ ಪಾತ್ರ ಮಾಡಿದ್ದರು. ಅಲ್ಲಿನ ತಮ್ಮ ಒಡನಾಟವನ್ನು ಮೆಲುಕು ಹಾಕುತ್ತಾ ಭಾವುಕರಾಗಿದ್ದಾರೆ.

ಚಿತ್ರೀಕರಣದ ಸಂದರ್ಭದಲ್ಲಿ ಸುಶಾಂತ್ ಅವರು ಸಕಾರಾತ್ಮಕತೆ ಮತ್ತು ಆಶಾದಾಯಕ ಹುಮ್ಮಸ್ಸು ಹೊಂದಿದ್ದರು. ಇನ್ನಷ್ಟು ಏನಾದರು ಸಾಧಿಸಬೇಕು ಎಂಬ ಛಲ ಹೊಂದಿದ್ದರು ಎಂದು ಖೇರ್​ ತಿಳಿಸಿದ್ದಾರೆ. 5 ನಿಮಿಷದ ವಿಡಿಯೋದಲ್ಲಿ ಪ್ರೀತಿ, ಸಕಾರಾತ್ಮಕತೆ ಮತ್ತು ಸಹಾನುಭೂತಿಯನ್ನು ಹಂಚಲು ಖೇರ್ ವಿನಂತಿಸಿದ್ದಾರೆ.

ABOUT THE AUTHOR

...view details