ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಕ್ಕ ಧಾರಾವಾಹಿಯಲ್ಲಿ ದ್ವಿಪಾತ್ರ ಮಾಡಿ ಕಿರುತೆರೆ ಪ್ರಿಯರ ಮನ ಸೆಳೆದಿರುವ ಅನುಪಮಾ ಗೌಡ ಇದೀಗ ಮರಳಿ ಕಿರುತೆರೆಗೆ ಬಂದಿದ್ದಾರೆ. ಅನುಪಮಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಮಾಲ್ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಸಂತಸದ ವಿಚಾರವೆಂದರೆ ಇವರಿಗೆ ಮತ್ತೋರ್ವ ನಿರೂಪಕಿ ಸುಷ್ಮಾ ರಾವ್ ಸಾಥ್ ಕೊಡ್ತಿದ್ದಾರೆ.
'ಗೀತಾ' ಧಾರಾವಾಹಿಯಲ್ಲಿ ಕಾಣಿಸಿಕೊಳ್ತಾರೆ ಆ್ಯಂಕರ್ ಅನುಪಮಾ - ಅನುಪಮಾ ಗೌಡ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿಯಲ್ಲಿ ಅನುಪಮಾ ಗೌಡ ಕಾಣಿಸಿಕೊಳ್ಳಲಿದ್ದಾರೆ.
ದಸರಾ ಹಬ್ಬದ ಸಲುವಾಗಿ ಹಬ್ಬಕ್ಕೆ ಮೆರುಗು ನೀಡಲು ಚಂದನವನದ ತಾರೆಯರು ಕಿರುತೆರೆಗೆ ಬರುವುದು ಮಾಮೂಲಿ ಸಂಗತಿ. ಈಗಾಗಲೇ ಭಾವನಾ ರಾಮಣ್ಣ, ಪ್ರಿಯಾಂಕಾ ಉಪೇಂದ್ರ, ಶಾನ್ವಿ, ಹರಿಪ್ರಿಯಾ ಅವರೆಲ್ಲಾ ನಾಡ ಹಬ್ಬದ ನೆಪದಲ್ಲಿ ಕಿರುತೆರೆಗೆ ಕಾಲಿಟ್ಟಾಗಿದೆ. ಇದೀಗ ಅನುಪಮಾ ಗೌಡ ಹಾಗೂ ಸುಷ್ಮಾ ರಾವ್ ಸರದಿ.
ಅನುಪಮಾ ಗೌಡ ಮತ್ತು ಸುಷ್ಮಾ ರಾವ್ ಅವರ ಎಂಟ್ರಿಯಾಗುವುದರಿಂದ ಧಾರಾವಾಹಿಯಲ್ಲಿ ಆಗುವ ತಿರುವುಗಳೇನು?, ಯಾವುದಾದರೂ ರಹಸ್ಯಗಳು ಹೊರಬೀಳಲಿವೆಯಾ? ಎಂಬ ಕುತೂಹಲಕ್ಕೆಲ್ಲಾ ಉತ್ತರ ಸಿಗಬೇಕಾಗಿದೆ. ತುಂಬಾ ದೊಡ್ಡ ಗ್ಯಾಪ್ನ ನಂತರ ಅನುಪಮಾ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು ವೀಕ್ಷಕರು ಅವರನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ.