ಕರ್ನಾಟಕ

karnataka

ETV Bharat / sitara

'ಅಂತಿಮ್: ದಿ ಫೈನಲ್ ಟ್ರುತ್'.... ನವೆಂಬರ್ 26 ರಂದು ಬಿಡುಗಡೆ - ಬಾಲಿವುಡ್​​ ನಟ ಆಯುಶ್​ ಶರ್ಮ

ಬಾಲಿವುಡ್​ನ ಬಹುನಿರೀಕ್ಷಿತ ಚಿತ್ರ 'ಅಂತಿಮ್: ದಿ ಫೈನಲ್ ಟ್ರುತ್' ನವೆಂಬರ್ 26 ರಂದು ಬಿಡುಗಡೆಗೊಳ್ಳಲಿದೆ.

'Antim: The Final Truth' film is all set to hit silver screen on November 26
'ಅಂತಿಮ್: ದಿ ಫೈನಲ್ ಟ್ರುತ್'.... ನವೆಂಬರ್ 26 ರಂದು ಬಿಡುಗಡೆ

By

Published : Nov 11, 2021, 7:25 AM IST

ಬಾಲಿವುಡ್​​ ನಟ ಸಲ್ಮಾನ್​ ಖಾನ್​​, ಆಯುಶ್​ ಶರ್ಮಾ, ನಟಿ ಮಹಿಮಾ ಮಕ್ವಾನ ನಟನೆಯ ಬಹುನಿರೀಕ್ಷಿತ ಚಿತ್ರ 'ಅಂತಿಮ್: ದಿ ಫೈನಲ್ ಟ್ರುತ್' ನವೆಂಬರ್ 26 ರಂದು ಬಿಡುಗಡೆಗೊಳ್ಳಲು ಸಜ್ಜಾಗಿದೆ.

ಆಯುಶ್​ ಶರ್ಮಾ ಗ್ಯಾಂಗ್​ಸ್ಟರ್​ ಆಗಿ ಕಾಣಿಸಿಕೊಂಡರೆ, ಸಲ್ಲು ಸಿಖ್​ ಪೊಲೀಸ್​ ಆಗಿ ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ಪ್ರೇಕ್ಷಕರು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿನಿಮಾ ಟ್ರೈಲರ್​ ಈಗಾಗಲೇ ಕುತೂಹಲ ಹುಟ್ಟಿಸಿದೆ.

'ಅಂತಿಮ್: ದಿ ಫೈನಲ್ ಟ್ರುತ್'.... ನವೆಂಬರ್ 26 ರಂದು ಬಿಡುಗಡೆ

ಇದೊಂದು ಗ್ಯಾಂಗ್​ಸ್ಟರ್ ಕಥಾಹಂದರ ಇರುವ​ ಚಿತ್ರವಾಗಿದ್ದು, 2018ರಲ್ಲಿ ಬಿಡುಗಡೆಯಾದ ಮರಾಠಿಯ ಹಿಟ್ ಚಿತ್ರ 'ಮುಲ್ಶಿ ಪ್ಯಾಟರ್ನ್‌'ನ ರೀಮೇಕ್ ಆಗಿದೆ. ಮೂಲ ಚಿತ್ರವನ್ನು ಮರಾಠಿ ನಟ, ಚಲನಚಿತ್ರ ನಿರ್ಮಾಪಕ ಪ್ರವೀಣ್ ಟಾರ್ಡೆ ನಿರ್ಮಿಸಿದ್ದರೆ, ಹಿಂದಿಯ ರೀಮೇಕ್ ಅನ್ನು ನಟ, ಚಲನಚಿತ್ರ ನಿರ್ಮಾಪಕ ಮಹೇಶ್ ಮಂಜ್ರೇಕರ್ ನಿರ್ದೇಶಿಸಿದ್ದಾರೆ

ಚಿತ್ರದ ಕೆಲ ಭಯಾನಕ ದೃಶ್ಯಗಳನ್ನು ಪುಣೆಯಲ್ಲಿ ಚಿತ್ರೀಕರಿಸಲಾಗಿದ್ದು, ಚಿತ್ರದ ಪ್ರಮುಖ ಚೇಸಿಂಗ್​ ದೃಶ್ಯವನ್ನು ಕರ್ಜಾತ್‌ನಲ್ಲಿ ಚಿತ್ರೀಕರಿಸಲಾಗಿದೆ. ನಟ ನಿಕಿಟಿನ್ ಧೀರ್ ಕೂಡ ದರೋಡೆಕೋರನ ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:ಜೈಲಿನಿಂದ ಬಿಡುಗಡೆ ಬಳಿಕ ಪತಿ ಜತೆ ಮೊದಲ ಬಾರಿಗೆ ಶಿಲ್ಪಾ ಶೆಟ್ಟಿ ಕ್ಯಾಮೆರಾ ಮುಂದೆ ಪ್ರತ್ಯಕ್ಷ

ಇನ್ನೂ ಚಿತ್ರದಲ್ಲಿ ನಟಿಸಿರುವ ನಟಿ ಮಹಿಮ ಮಕ್ವಾನ ಚಿತ್ರದ ಮತ್ತು ತಂಡದ ಕುರಿತು ಹರ್ಷ ವ್ಯಕ್ತಪಡಿಸಿದ್ದಾರೆ. ಸಲ್ಮಾನ್​ ಖಾನ್​ ಅವರೊಂದಿಗೆ ಕೆಲಸ ಮಾಡಬೇಕೆನ್ನುವ ಕನಸು ನನಸಾಯಿತು. ಅವರೊಬ್ಬ ಉತ್ತಮ ಸಹುದ್ಯೋಗಿ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ABOUT THE AUTHOR

...view details