ರೆಬೆಲ್ ಸ್ಟಾರ್ ಅಂಬರೀಶ್ ನಟನೆಯ ಅಂತ ರಾಜಕೀಯ ಕಂ ಥ್ರಿಲ್ಲರ್ ಹೊಂದಿರುವ ಸಿನಿಮಾ. ಅಂಬಿ ನಾಯಕ ನಟನಾಗಿ ಅಭಿನಯಿಸಿದ್ದ ಈ ಮೂವಿ 1980ರ ದಶಕದಲ್ಲಿ ಕ್ರಾಂತಿಯನ್ನೇ ಉಂಟುಮಾಡಿತ್ತು.
ಕುತ್ತೇ ಕನ್ವರ್ ನಹೀ ಕನ್ವರ್ ಲಾಲ್ ಬೊಲೋ.. 'ಅಂತ' ಚಿತ್ರಕ್ಕೆ ಹೊಸ ಸ್ಪರ್ಶ, ಜೂನ್ 7ಕ್ಕೆ ಮರು ಬಿಡುಗಡೆ - etv bharat
ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ‘ಅಂತ’ ಹೆಚ್ ಕೆ ಅನಂತರಾಮ್ ಅವರ ಕಾದಂಬರಿ ಆದರಿಸಿದ ಚಿತ್ರ. ಈ ಸಿನಿಮಾದಿಂದಲೇ ಅಂಬಿಗೆ ರೆಬೆಲ್ ಸ್ಟಾರ್ ಎಂಬ ಪಟ್ಟ ಬಂದಿತ್ತು.
ಇದೀಗ ಈ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗ್ತಿದೆ. ಎಲ್ಲ ಅಂದ್ಕೊಂಡಂತಾಗಿದ್ರೇಮೇ 31ಕ್ಕೆ ಚಿತ್ರ ರಿಲೀಸ್ ಆಗ್ಬೇಕಿತ್ತು. ಆದರೆ, ಅದೇ ದಿನ ಅಂಬಿ ಪುತ್ರ ಅಭಿ ನಟನೆಯ ಅಮರ್ ಸಿನಿಮಾ ರಿಲೀಸಾಯ್ತು. ಅಂಬಿ ಮತ್ತು ಅಭಿಷೇಕ್ ಅಭಿಮಾನಿಗಳನ್ನು ಡಿವೈಡ್ ಮಾಡಿದಂತಾಗುತ್ತದೆ ಎಂದು ಅಂತ ಸಿನಿಮಾ ಬಿಡುಗಡೆಯನ್ನು ಒಂದು ವಾರ ಮುಂದೂಡಲಾಗಿದೆ. ಜೂನ್ 7ರಂದು ತೆರೆಗೆ ಅಪ್ಪಳಸಲಿದೆ. ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ‘ಅಂತ’ ಹೆಚ್ ಕೆ ಅನಂತರಾಮ್ ಅವರ ಕಾದಂಬರಿ ಆದರಿಸಿದ ಚಿತ್ರ. ಈ ಸಿನಿಮಾದಿಂದಲೇ ಅಂಬಿಗೆ ರೆಬೆಲ್ ಸ್ಟಾರ್ ಎಂಬ ಪಟ್ಟ ಬಂದಿತ್ತು.
ಈ ಸಿನಿಮಾ ಪರಿಮಳ ಆರ್ಟ್ಸ್ ಹೆಚ್ ಎನ್ ಮಾರುತಿ ಹಾಗೂ ವೇಣುಗೋಪಾಲ್ ನಿರ್ಮಾಣದಲ್ಲಿ ಮೂಡಿ ಬಂದಿದೆ. ಜಿ ಕೆ ವೆಂಕಟೇಶ್ ಅವರ ಸಂಗೀತ ಹೆಚ್ಚು ಜನಪ್ರಿಯ ಪಡೆಯಿತು. ಈಗ ಡಿಜಿಟಲ್ ಫಾರ್ಮ್ಯಾಟ್ನಲ್ಲಿ ಚಿತ್ರ ಸಿದ್ದವಾಗಿದೆ. ಕೆಲ ತಾಂತ್ರಿಕ ಗುಣಮಟ್ಟವನ್ನೂ ಚಿತ್ರಕ್ಕೆ ತುಂಬಲಾಗಿದೆ.ಅಂತ ಸಿನಿಮಾದಲ್ಲಿ ಅಂಬಿ, ಲಕ್ಷ್ಮಿ, ಜಯಮಾಲಾ, ಲತಾ, ಪಂಡರಿಬಾಯಿ, ವಜ್ರಮುನಿ, ಪ್ರಭಾಕರ್, ಸುಂದರಕೃಷ್ಣ ಅರಸ್, ಶಕ್ತಿ ಪ್ರಸಾದ್, ಲಕ್ಷ್ಮಣ್, ಸಿ. ಸೀತಾರಾಂ ಮುಖ್ಯ ಭೂಮಿಕೆಯ್ಲಲಿ ಕಾಣಿಸಿದ್ದಾರೆ.