ಕರ್ನಾಟಕ

karnataka

ETV Bharat / sitara

ಬಿಗ್​ಬಾಸ್​ ಮನೆಯಿಂದ ಮತ್ತೊಬ್ಬ ಸ್ಪರ್ಧಿ ಹೊರಕ್ಕೆ... ಯಾಕೆ!? - ಬಿಗ್​​ ಬಾಸ್​​ ಕಿಶನ್​​​

ಮನೆಯ 18 ಸದಸ್ಯರಲ್ಲಿ ಮೊತ್ತೊಬ್ಬ ಸದಸ್ಯ ಮನೆಯಿಂದ​ ಹೊರಗೆ ಹೋಗುವಂತೆ ಬಿಗ್​ಬಾಸ್​ ಸೂಚಿಸಿದ್ದಾರೆ. ಹೌದು, ಡ್ಯಾನ್ಸರ್​ ಕಿಶನ್​​ಗೆ ಜಾಂಡೀಸ್​ ಇರುವ ಕಾರಣ ಚಿಕಿತ್ಸೆಗೆಂದು ಆಸ್ಪತ್ರೆಗೆ ಕಳುಹಿಸಲಾಗಿದೆ.

ಕಿಶನ್​

By

Published : Oct 19, 2019, 12:02 PM IST

ಬಿಗ್​ ಮನೆಗೆ ಸ್ಪರ್ಧಿಗಳು ಹೋಗಿ ಇನ್ನು ಒಂದು ವಾರವೂ ಕಂಪ್ಲೀಟ್​ ಆಗಿಲ್ಲ. ಆದ್ರೆ ಇಬ್ಬರು ಸದಸ್ಯರು ಅನಾರೋಗ್ಯದ ಕಾರಣ ದೊಡ್ಡ ಮನೆಯಿಂದ ಹೊರಗೆ ಹೋಗಬೇಕಾಗಿದೆ.

ಬಿಗ್​​ಬಾಸ್​ ಮನೆಗೆ ಹೋದ ಮೊದಲ ದಿನವೇ ಲೋ ಶುಗರ್​ ಕಾರಣಕ್ಕೆ ರವಿ ಬೆಳಗೆರೆ ಆಸ್ಪತ್ರೆಗೆ ತೆರಳುವ ಕಾರಣ ಮನೆಯಿಂದ ಹೊರ ನಡೆಯಬೇಕಾಯಿತು. ನಂತ್ರ ದೊಡ್ಡ ಮನೆಗೆ ವಾಪಸ್​ ಆಗಿದ್ದು, ಈ ಶನಿವಾರದವರೆಗೆ ಗೆಸ್ಟ್​​ ಆಗಿ ಇರುವುದು ಹಳೆಯ ವಿಚಾರ.

ಸದ್ಯ 18 ಸದಸ್ಯರಲ್ಲಿ ಮೊತ್ತೊಬ್ಬ ಸದಸ್ಯನಿಗೆ ಮನೆಯಿಂದ​ ಹೊರಗೆ ಹೋಗಲು ಬಿಗ್​ ಬಾಸ್​ ಸೂಚಿಸಿದ್ದಾರೆ. ಹೌದು, ಡ್ಯಾನ್ಸರ್​ ಕಿಶನ್​​ಗೆ ಜಾಂಡೀಸ್​ ಇರುವ ಕಾರಣ ಚಿಕಿತ್ಸೆಗೆಂದು ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಕಾಯಿಲೆ ಉಲ್ಬಣವಾದ್ರೆ ಕಿಶನ್​​ಗೆ ಬಿಗ್​ ಬಾಸ್​ ಮನೆಯಲ್ಲಿ ಆಟವಾಡಲು ಸಾಧ್ಯವಾಗದೇ ಇರಬಹುದು.

ಇನ್ನೊಂದು ವಿಚಾರ ಅಂದ್ರೆ ಈ ವಾರ ಕಿಶನ್​ ನಾಮಿನೇಟ್​ ಆಗಿರಲಿಲ್ಲ. ತಮ್ಮ ಆಟಗಳನ್ನು ಸೇಫ್​ ಆಗಿಯೇ ಮುಗಿಸಿರುವ ಕಿಶನ್​​ ನಾಮಿನೇಟ್​​ ಜಾಲದಿಂದ ತಪ್ಪಿಸಿಕೊಂಡಿದ್ರು. ಇನ್ನು ಇಂದು 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮವಿದ್ದು, ದೊಡ್ಡ ಮನೆಯಿಂದ ಯಾರೆಲ್ಲ​ ಹೋಗ್ತಾರೆ, ಯಾರೆಲ್ಲ ಉಳಿತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ABOUT THE AUTHOR

...view details