ರಾಮ್ಗೋಪಾಲ್ ವರ್ಮಾ ನಿರ್ದೇಶನದ ‘ಲಕ್ಷ್ಮೀಸ್ ಎನ್ಟಿಆರ್‘ ಚಿತ್ರ ಆಂಧ್ರದಲ್ಲಿ ಬಿಡುಗೆಯಾಗಲು ವಿಘ್ನಗಳು ಎದುರಾಗುತ್ತಲೇ ಇವೆ. ಮೇ 1 ರಂದು ಚಿತ್ರ ಬಿಡುಗಡೆಯಾಗುತ್ತದೆ ಎನ್ನಲಾಗಿತ್ತು. ಆದರೆ ಅಂದೂ ಕೂಡಾ ಚಿತ್ರ ಬಿಡುಗಡೆಯಾಗಿಲ್ಲ.
ಆಂಧ್ರದಲ್ಲಿ ‘ಲಕ್ಷ್ಮೀಸ್ ಎನ್ಟಿಆರ್‘ ಚಿತ್ರ ಬಿಡುಗಡೆಗೆ ಮತ್ತೊಂದು ವಿಘ್ನ - undefined
ಆರ್ಜಿವಿ ನಿರ್ದೇಶನದ ‘ಲಕ್ಷ್ಮೀಸ್ ಎನ್ಟಿಆರ್‘ ಮಾರ್ಚ್ 29 ರಂದು ತೆಲಂಗಾಣ ಸೇರಿ ದೇಶದ ಇತರ ಭಾಗಗಳಲ್ಲಿ ಬಿಡುಗಡೆಯಾದರೂ ಆಂಧ್ರದಲ್ಲಿ ಇನ್ನೂ ಬಿಡುಗಡೆಯಾಗಿಲ್ಲ. ಚಿತ್ರ ಬಿಡುಗಡೆಗೆ ಸಾಕಷ್ಟು ಅಡೆತಡೆಗಳು ಎದುರಾಗುತ್ತಲೇ ಇದೆ.

ಆಂಧ್ರ, ತೆಲಂಗಾಣ ಎರಡೂ ರಾಜ್ಯಗಳಲ್ಲೂ ಚಿತ್ರವನ್ನು ಒಟ್ಟಿಗೆ ಬಿಡುಗಡೆ ಮಾಡಲು ವರ್ಮಾ ಪ್ಲಾನ್ ಮಾಡಿದ್ದರು. ಆದರೆ ತೆಲಂಗಾಣದಲ್ಲಿ ಚಿತ್ರ ಬಿಡುಗಡೆಯಾದರೂ ಆಂಧ್ರದಲ್ಲಿ ಮಾತ್ರ ರಿಲೀಸ್ ಆಗಲೇ ಇಲ್ಲ. ಇನ್ನು ರಾಮ್ಗೋಪಾಲ್ ವರ್ಮಾ ಚಿತ್ರ ಬಿಡುಗಡೆ ಬಗ್ಗೆ ಸುದ್ದಿಗೋಷ್ಠಿ ನಡೆಸಲು ವಿಜಯವಾಡಗೆ ತೆರಳಿದ್ದಾಗ ಪೊಲೀಸರು ವರ್ಮಾರನ್ನು ವಿಮಾನ ನಿಲ್ದಾಣದಲ್ಲೇ ತಡೆದು ಅಲ್ಲಿಂದ ವಾಪಸ್ ಕಳಿಸಿದ್ದರು. ಅಲ್ಲದೆ ಅದಕ್ಕೂ ಮುನ್ನ ಒಮ್ಮೆ ವಿಜಯವಾಡಕ್ಕೆ ತೆರಳಿದ್ದಾಗ ವರ್ಮಾ ಉಳಿದುಕೊಳ್ಳಲು ಅಲ್ಲಿನ ಯಾವ ಹೋಟೆಲ್ಗಳು ಕೂಡಾ ರೂಮ್ ನೀಡಿರಲಿಲ್ಲ. ಆದರೆ ಇಷ್ಟಕ್ಕೇ ಸುಮ್ಮನಾಗದ ವರ್ಮಾ ಮೇ 1ರಂದು ಚಿತ್ರವನ್ನು ಆಂಧ್ರದಲ್ಲಿ ಬಿಡುಗಡೆ ಮಾಡೇ ತೀರುತ್ತೇನೆ ಎಂದು ಹೇಳಿದ್ದರು. ಆದರೆ ಮೇ 1 ರಂದು ಕೂಡಾ ಚಿತ್ರ ಬಿಡುಗಡೆಯಾಗಲಿಲ್ಲ.
ಮೇ 19 ರಂದು ಚಿತ್ರ ಬಿಡುಗಡೆ ಮಾಡಲು ಮತ್ತೊಂದು ದಿನಾಂಕ ನಿಗದಿಪಡಿಸಲಾಯಿತು. ಆದರೆ ಆಂಧ್ರದ ಚಂದ್ರಗಿರಿ ಸೇರಿ ಇನ್ನಿತರ ಕಡೆಗಳಲ್ಲಿ ಮರು ಮತದಾನ ನಡೆಯುತ್ತಿರುವುದರಿಂದ ಇಂದೂ ಕೂಡಾ ಬಿಡುಗಡೆಯಾಗಿಲ್ಲ. ಮೇ 23 ರ ಚುನಾವಣಾ ಫಲಿತಾಂಶದ ನಂತರವಷ್ಟೇ ಚಿತ್ರ ಬಿಡುಗಡೆಯಾಗಬಹುದು ಎನ್ನಲಾಗುತ್ತಿದೆ.