ಕರ್ನಾಟಕ

karnataka

ETV Bharat / sitara

ವೀರಕನ್ನಡಿಗನ ನಾಯಕಿಗೀಗ ಎಷ್ಟು ತಿಂಗಳು: ಇದು ಫೇಕ್ ಅಥವಾ ರಿಯಲ್​..? - ಪುನೀತ್ ರಾಜ್​ಕುಮಾರ್

'ವೀರ ಕನ್ನಡಿಗ' ಸಿನಿಮಾದಲ್ಲಿ ಪುನೀತ್ ಜೊತೆ ನಾಯಕಿಯಾಗಿ ನಟಿಸಿರುವ ಅನಿತಾ ಇತ್ತೀಚೆಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬೆಲ್ಲಿ ಬಂಪ್ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ಸ್ನೇಹಿತರು ಹಾಗೂ ಅಭಿಮಾನಿಗಳು ಆಕೆಯ ಕಾಲೆಳೆದಿದ್ದಾರೆ.

ಅನಿತಾ ಹಾಸನಂದಿನಿ

By

Published : Apr 5, 2019, 9:49 AM IST

ಈ ನಾಯಕಿ ಕನ್ನಡಿಗರಿಗೆ ಚಿರಪರಿಚಿತ. ಪುನೀತ್ ರಾಜ್​​ಕುಮಾರ್ ಜೊತೆ ವೀರಕನ್ನಡಿಗ, ಶಿವರಾಜ್​​ಕುಮಾರ್ ಜೊತೆ ಗಂಡುಗಲಿ ಕುಮಾರ ರಾಮ ಹಾಗೂ ಧ್ಯಾನ್ ಜೊತೆ ಹುಡುಗ ಹುಡುಗಿ ಸಿನಿಮಾದಲ್ಲಿ ನಟಿಸಿದ ಈಕೆ ಹೆಸರು ಅನಿತಾ ಹಾಸನಂದಿನಿ.

ಅನಿತಾ ಹಾಸನಂದಿನಿ

2013 ರಲ್ಲಿ ಉದ್ಯಮಿ ರೋಹಿತ್ ರೆಡ್ಡಿಯೊಂದಿಗೆ ಸಪ್ತಪದಿ ತುಳಿದ ಅನಿತಾ ಇತ್ತೀಚೆಗೆ ಇನ್ಸ್​​ಟಾಗ್ರಾಮ್​​ನಲ್ಲಿ ಫೋಟೋವೊಂದನ್ನು ಷೇರ್ ಮಾಡಿಕೊಂಡಿದ್ದಾರೆ. ಅದನ್ನು ನೋಡಿದ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಶಾಕ್. ಅನಿತಾ ಪ್ರೆಗ್ನೆಂಟ್ ಅನ್ನೋ ವಿಷಯವನ್ನು ನಮಗೆ ತಿಳಿಸೇ ಇಲ್ಲ. ಹಾಗೇ ನೆನ್ನೆ ಮೊನ್ನೆ ನೋಡಿದ ಅನಿತಾಗೆ ಇಷ್ಟು ಬೇಗ ಹೊಟ್ಟೆ ಹೇಗೆ ಬಂದು ಅನ್ನೋ ಅನುಮಾನ ಹಾಗೂ ಕನ್ಫ್ಯೂಸ್​​​ನಿಂದ ಆಕೆಗೆ ಫೋನ್ ಮಾಡಿದಾಗಲೇ ತಿಳಿದದ್ದು ನಿಜ ಏನು ಅಂತ.

ಪತಿ ರೋಹಿತ್​ ಜೊತೆ ಅನಿತ

ಖಾಸಗಿ ಹಿಂದಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿನ್​-3 ಧಾರಾವಾಹಿಯಲ್ಲಿ ಅನಿತಾ ಸದ್ಯಕ್ಕೆ ಗರ್ಭಿಣಿ ಪಾತ್ರ ಮಾಡುತ್ತಿದ್ದಾರೆ. ಈ ಕಾಸ್ಟ್ಯೂಮ್​​ನಲ್ಲೇ ಅನಿತಾ ನಾಗಿನ್ ಸೆಟ್​​​​​​ನಿಂದ ಬೇಬಿ ಬಂಪ್ ಫೋಟೋಗಳನ್ನು ಪೋಸ್ಟ್ ಮಾಡಿ ಅದನ್ನು ಕ್ಲಿಕ್ ಮಾಡಿದ ಸ್ನೇಹಿತನಿಗೆ ಥ್ಯಾಂಕ್ಸ್ ಕೂಡಾ ಹೇಳಿದ್ದಾರೆ. ಇನ್ನು ಫೋಟೋಗಳನ್ನು ನೋಡಿದ ಅನಿತಾ ಪತಿ ಕೂಡಾ ಆಕೆ ಕಾಲೆಳೆದು ಕಮೆಂಟ್ ಮಾಡಿದ್ದಾರೆ.

ಅನಿತ

ABOUT THE AUTHOR

...view details