ಅಮ್ಮ ಎಂದರೆ ಏನೋ ಹರುಷವೋ, ನಮ್ಮ ಪಾಲಿಗೆ ಅವಳೇ ದೈವವು… ಅಮ್ಮ ಎನ್ನುವ ಎರಡಕ್ಷರದ ಪದವನ್ನು ವಿವರಿಸುವುದು ತುಂಬಾನೇ ಕಷ್ಟ! ಅಮ್ಮ ತ್ಯಾಗಮಯಿ, ಅಮ್ಮ ಸಹನಾಮಯಿ, ಅಮ್ಮ ಕರುಣಾಮಯಿ.
ಅಮ್ಮ ಕರುಣಾಮಯಿ ಎಂದ ನಟ ಅನಿರುದ್ಧ್.. - ಅನಿರುದ್ಧ್
ನಟ ಅನಿರುದ್ಧ್ ತಾಯಂದಿರ ದಿನಕ್ಕೆ ಶುಭ ಕೋರಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾನ್ನಲ್ಲಿ ಪೋಸ್ಟ್ ಮಾಡಿದ್ದಾರೆ.
![ಅಮ್ಮ ಕರುಣಾಮಯಿ ಎಂದ ನಟ ಅನಿರುದ್ಧ್.. Anirudh wishes To Mother's Day](https://etvbharatimages.akamaized.net/etvbharat/prod-images/768-512-7143401-857-7143401-1589117651444.jpg)
ಅನಿರುದ್ಧ್
ಇಂದು ಅಮ್ಮಂದಿರ ದಿನ. ಎಲ್ಲರೂ ತಮ್ಮ ತಮ್ಮ ತಾಯಿಗೆ ಅಮ್ಮಂದಿರ ದಿನದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಅದೇ ರೀತಿ ಅನಿರುದ್ಧ್ ಜತ್ಕರ್ ಕೂಡಾ ಬಹಳ ವಿಶೇಷವಾಗಿ ತಮ್ಮ ತಾಯಿಗೆ ಅಮ್ಮಂದಿರ ದಿನದ ಶುಭಾಶಯ ಹೇಳಿದ್ದು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ.
ಜೊತೆಜೊತೆಯಲಿ ಧಾರಾವಾಹಿಯ ಆರ್ಯವರ್ಧನ್ ಆಗಿ ಮಿಂಚುತ್ತಿರುವ ಅನಿರುದ್ಧ್ ಅವರು ತಮ್ಮ ಅಮ್ಮನಿಗೆ ವಿಶ್ ಮಾಡಿದ ಸುಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.