ಕರ್ನಾಟಕ

karnataka

ETV Bharat / sitara

ಮಕ್ಕಳೊಂದಿಗೆ 'ಹೆಜ್ಜೆ' ಹಾಕಿದ ನಟ ಅನಿರುದ್ಧ್​​...'ಟಿಕ್​ಟಾಕ್​​' ವೀಕ್ಷಕರಿಗೆ ಹೆಚ್ಚಿದ ಕುತೂಹಲ! - ಟಿಕ್​ಟಾಕ್​​' ವೀಕ್ಷಕರಿಗೆ ಹೆಚ್ಚಿದ ಕುತೂಹಲ!

ಟಿಕ್ ಟಾಕ್ ವಿಡಿಯೋ ನೋಡಿದ ನಂತರ ಅನಿರುದ್ಧ್​​ರಂತೆ ಅವರ ಮಕ್ಕಳೂ ಕೂಡಾ ನಟನಾ ಲೋಕದಲ್ಲಿ ಕಾಣಿಸಿಕೊಳ್ಳುತ್ತಾರಾ? ಎಂಬ ಯೋಚನೆ ಒಂದಷ್ಟು ವೀಕ್ಷಕರಿಗೆ ಮೂಡಿದೆ.

Anirudh Dance with his childrens
ಮಕ್ಕಳೊಂದಿಗೆ 'ಹೆಜ್ಜೆ' ಹಾಕಿದ ನಟ ಅನಿರುದ್ಧ್...

By

Published : May 7, 2020, 8:05 PM IST

ಜೊತೆ ಜೊತೆಯಲಿ ಧಾರಾವಾಹಿಯ ಆರ್ಯವರ್ಧನ್ ಆಗಿ ಕಿರುತೆರೆ ಲೋಕದಲ್ಲಿ ಮನೆ ಮಾತಾಗಿರುವ ಅನಿರುದ್ಧ್ ಸದ್ಯ ಲಾಕ್​ಡೌನ್​ ಸಮಯವನ್ನು ಮನೆಮಂದಿಯವರೊಂದಿಗೆ ಸಖತ್ ಖುಷಿಯಿಂದ ಕಳೆಯುತ್ತಿದ್ದಾರೆ.ಇದಕ್ಕೆ ಸಾಕ್ಷಿ ಎಂಬಂತೆ ಮಕ್ಕಳೊಂದಿಗೆ ಡ್ಯಾನ್ಸ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಅಪ್ಪನ ಜೊತೆಗೆ ಮಕ್ಕಳು ಕೂಡಾ ಹೆಜ್ಜೆ ಹಾಕಿದ್ದು, ವಿಡಿಯೋ ನೋಡಿದ ವೀಕ್ಷಕರು ಮೋಡಿಗೆ ಒಳಗಾಗಿದ್ದಾರೆ. ಟಿಕ್ ಟಾಕ್ ವಿಡಿಯೋ ನೋಡಿದ ನಂತರ ಅನಿರುದ್ಧ್ ಅವರಂತೆ ಮಕ್ಕಳು ಕೂಡಾ ನಟನಾ ಲೋಕದಲ್ಲಿ ಕಾಣಿಸಿಕೊಳ್ಳುತ್ತಾರಾ? ಎಂಬ ಯೋಚನೆ ಒಂದಷ್ಟು ವೀಕ್ಷಕರಿಗೆ ಮೂಡಿದೆ. ಅದಕ್ಕೆ ಸ್ವತಃ ಅನಿರುದ್ಧ್ ಅವರೇ ಉತ್ತರವನ್ನೂ ನೀಡಿದ್ದಾರೆ.

ಮಕ್ಕಳೊಂದಿಗೆ 'ಹೆಜ್ಜೆ' ಹಾಕಿದ ನಟ ಅನಿರುದ್ಧ್

https://vm.tiktok.com/caHoeE/

ಅನಿರುದ್ಧ್ ಮಗ ಜೇಷ್ಠವರ್ಧನ್ 10 ನೇ ತರಗತಿಯಲ್ಲಿ ಓದುತ್ತಿದ್ದರೆ, ಮಗಳು 7 ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಎಲ್ಲ ಮಕ್ಕಳಂತೆ ಶಾಲೆಯಲ್ಲಿ ನಡೆಯುವ ಸಾಂಸ್ಕೃತಿಕ ಚಟುವಟಿಕೆಗಳಾದ ಡ್ಯಾನ್ಸ್, ನಾಟಕಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇವರು, ಬಣ್ಣದ ಲೋಕಕ್ಕೆ ಕಾಲಿಡುವ ಬಗ್ಗೆ ಯಾವುದೇ ಯೋಚನೆಯನ್ನು ಇಲ್ಲಿಯ ತನಕ ಮಾಡಿಲ್ಲ. ಅಕಸ್ಮಾತ್ ಅವರು ಕೂಡಾ ನನ್ನಂತೆ ಈ ಕ್ಷೇತ್ರಕ್ಕೆ ಕಾಲಿಡ ಬಯಸಿದರೆ ಅದಕ್ಕೆ ನನ್ನ ಸಂಪೂರ್ಣ ಬೆಂಬಲ ಇರುವುದಂತೂ ನಿಜ ಎಂದಿದ್ದಾರೆ.

ABOUT THE AUTHOR

...view details