ಬಹುಭಾಷೆ ನಟಿಯಾಗಿ ಮಿಂಚಿದ ನಟಿ ಡಾ. ಭಾರತಿ ವಿಷ್ಣುವರ್ಧನ್. ಕೆಲವು ತಿಂಗಳಗಳ ಹಿಂದೆ ಅಳಿಯ ಅನಿರುದ್ಧ ಭಾರತಿ ವಿಷ್ಣುವರ್ಧನ್ ಅವರ ವೈಯಕ್ತಿಕ ಜೀವನ ಮತ್ತು ಬಣ್ಣದ ಬದುಕಿನ ಬಗ್ಗೆ ಬಾಳೇ ಬಂಗಾರ ಎಂಬ ಹೆಸರಿನಲ್ಲಿ ಸಾಕ್ಷ್ಯಚಿತ್ರವನ್ನ ನಿರ್ದೇಶನ ಮಾಡುವ ಗಮನ ಸೆಳೆದಿದ್ದರು. ಸದ್ಯ ಸಿನಿಮಾ ಮತ್ತು ಧಾರಾವಾಹಿ ಲೋಕದಲ್ಲಿ ಅವರು ತಮ್ಮದೇ ಛಾಪು ಮೂಡಿಸಿರುವ ಅನಿರುದ್ಧ ನಟನೆ, ಹಾಡುಗಾರಿಕೆ ಹಾಗು ನಿರ್ದೇಶನ ಮಾಡುವ ಮೂಲಕ ಬಹುಮುಖ ಪ್ರತಿಭೆ ಅಂತಾ ಫ್ರೂವ್ ಮಾಡಿದ್ದಾರೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಸೇರಿದ ಭಾರತಿ ವಿಷ್ಣುವರ್ಧನ್ ಕುರಿತಾದ ಸಾಕ್ಷ್ಯಚಿತ್ರ ಭಾರತಿ ವಿಷ್ಣುವರ್ಧನ್ ಅವ್ರ ಬಗ್ಗೆ ಅನಿರುದ್ದ ಸಾಕ್ಷ್ಯಚಿತ್ರ ತಯಾರಿಸಿರುವುದು ಗೊತ್ತೇ ಇದೆ. ಇದೀಗ ಬಾಳೇ ಬಂಗಾರ ಶೀರ್ಷಿಕೆಯಲ್ಲಿ ಮೂಡಿಬಂದಿರುವ ಈ ಡಾಕ್ಯುಮೆಂಟರಿ ಈಗ ದಾಖಲೆ ಬರೆದಿದೆ. ಹೌದು ಅನಿರುದ್ಧ ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಇದೀಗ ಬಾಳೇ ಬಂಗಾರ ಸಾಕ್ಷ್ಯಚಿತ್ರಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಕಲಾಂ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ದಾಖಲೆ ನಿರ್ಮಿಸಿದೆ.
ಈ ಸಾಕ್ಷ್ಯಚಿತ್ರದ ಅವಧಿ 141 ನಿಮಿಷಗಳು. ಬದುಕಿರುವ ಭಾರತದ ಮೇರು ನಟಿಯ ಕುರಿತಾದ ಅತ್ಯಂತ ದೀರ್ಘ ಕಾಲಾವಧಿಯ ಸಾಕ್ಷ್ಯಚಿತ್ರ ಎಂಬ ದಾಖಲೆಯನ್ನು ಈ ಡಾಕ್ಯುಮೆಂಟರಿ ಬರೆದಿದೆ. 150ಕ್ಕೂ ಅಧಿಕ ಸಿನಿಮಾಗಳಲ್ಲಿ ಭಾರತಿ ವಿಷ್ಣುವರ್ಧನ್ ಅವರು ನಟಿಸಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಈಗಾಗಲೇ ಗೌರವಿಸಿದೆ. ಇಷ್ಟೆಲ್ಲ ಜನಪ್ರಿಯತೆ ಗಳಿಸಿದ ಅವರ ಬದುಕಿನಲ್ಲಿ ಹಲವು ಏಳು, ಬೀಳುಗಳಿವೆ. ಆ ಎಲ್ಲ ವಿವರಗಳನ್ನು ಬಾಳೇ ಬಂಗಾರ ಸಾಕ್ಷ್ಯಚಿತ್ರ ಒಳಗೊಂಡಿದೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಸೇರಿದ ಭಾರತಿ ವಿಷ್ಣುವರ್ಧನ್ ಕುರಿತಾದ ಸಾಕ್ಷ್ಯಚಿತ್ರ ಇದರ ಜೊತೆಗೆ ಭಾರತಿ ವಿಷ್ಣುವರ್ಧನ್ ಅವರ ಬದುಕು, ಸಾಧನೆ, ವ್ಯಕ್ತಿತ್ವದ ಬಗ್ಗೆ ಚಿತ್ರರಂಗದ ಅನೇಕರು ಮಾತನಾಡಿದ್ದಾರೆ. ಅನಂತ್ ನಾಗ್, ಶಿವರಾಮ್, ಎಚ್ಆರ್ ಭಾರ್ಗವ, ಮೋಹನ್ ಲಾಲ್, ಶಿವರಾಜ್ಕುಮಾರ್, ಹೇಮಾ ಚೌಧರಿ ಸೇರಿದಂತೆ ಚಿತ್ರರಂಗದ ಅನೇಕ ಹಿರಿಯರ ಸಂದರ್ಶನ ಈ ಸಾಕ್ಷ್ಯಚಿತ್ರದಲ್ಲಿ ಇದೆ. ಈ ಎಲ್ಲ ಕಾರಣಗಳಿಗಾಗಿ ಬಾಳೇ ಬಂಗಾರ ಡಾಕ್ಯುಮೆಂಟರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ ಸಿಕ್ಕಿರುವುದು ನಟ ಹಾಗು ನಿರ್ದೇಶಕ ಅನಿರುದ್ಧಗೆ ಪ್ರಶಸ್ತಿ ಸಿಕ್ಕಟ್ಟೇ ಸಂತೋಷವಾಗಿದೆ.