ಬಾಲ್ಯದ ಫೋಟೋಗಳು ಸಿಕ್ಕಾಗ ಅದನ್ನು ನೋಡುವುದೇ ಒಂದು ಆನಂದ. ಆಗ ಫೋಟೋ ತೆಗೆದ ಸಮಯ, ಅದರ ಹಿಂದೆ ಅಡಗಿರುವ ಸುಂದರ ಸಮಯ ಪುಸ್ತಕದ ಪುಟ ತಿರುವಿದ ಹಾಗೆ ಒಂದೊಂದೇ ನೆನಪಾಗುತ್ತದೆ.
ಇಷ್ಟೆಲ್ಲ ಪೀಠಿಕೆ ಬರೆಯುವುದಕ್ಕೂ ಕಾರಣವಿದೆ. ಸದ್ಯ ಕಿರುತೆರೆಯಲ್ಲಿ ಕೇಳಿ ಬರುತ್ತಿರುವ ಜನಪ್ರಿಯ ನಟನ ಹೆಸರು. ಅವರು ಬೇರಾರೂ ಅಲ್ಲ. ಅಲ್ಪ ಸಮಯದಲ್ಲಿ ಕಿರುತೆರೆಯ ವೀಕ್ಷಕರ ಮನಗೆದ್ದ ಅನಿರುದ್ಧ್ ಜತ್ಕರ್.
ಈ ಪುಟ್ಟ ಪೋರ ಈಗ ಕಿರುತೆರೆಯ 'ವರ್ಧನ' ಜೊತೆಜೊತೆಯಲಿ ಧಾರಾವಾಹಿಯಲ್ಲಿ ನಾಯಕ ಆರ್ಯವರ್ಧನ್ ಆಗಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಅನಿರುದ್ಧ್ ಜತ್ಕರ್, ತಮ್ಮ ಬಾಲ್ಯದಲ್ಲಿ ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ. ಈ ಫೋಟೋಗಳು ಫೇಸ್ಬುಕ್ನಲ್ಲಿ ದೊರಕಿದ್ದು ಇದನ್ನು ನೋಡಿದರೆ ಅವರ ಅಭಿಮಾನಿಗಳು ಮತ್ತೊಮ್ಮೆ ಫಿದಾ ಆಗುವುದು ಸತ್ಯ.
ತುಂಟಾಟ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅನಿರುದ್ಧ್ ಜನಪ್ರಿಯರಾಗಿದ್ದು ಕಿರುತೆರೆಯ ಮೂಲಕ. ಕಡಿಮೆ ಅವಧಿಯಲ್ಲಿ ಆರ್ಯವರ್ಧನ್ ಪಾತ್ರ ಜನರಿಗೆ ತೀರಾ ಹತ್ತಿರವಾಗಿದ್ದು ಅನಿರುದ್ಧ್ ಅವರು ನೂರಾರು ಅಭಿಮಾನಿಗಳನ್ನು ಗಳಿಸಿ ಯಶಸ್ವಿಯಾಗಿದ್ದಾರೆ.