ಬಾಲಿವುಡ್ ನಟ ಅನಿಲ್ ಕಪೂರ್ ಹಾಗೂ ಅನುರಾಗ್ ಕಶ್ಯಪ್ ನಟನೆಯ ಎಕೆ v/s ಎಕೆ ಸಿನಿಮಾ ಇತ್ತೀಚಿನ ಕೆಲವು ದಿನಗಳಿಂದ ಸುದ್ದಿಯಾಗುತ್ತಿದೆ. ಭಾರತೀಯ ವಾಯುಸೇನೆಯ ಸಮವಸ್ತ್ರಕ್ಕೆ ಅವಮಾನ ಮಾಡಲಾಗಿದೆ ಎನ್ನುವ ಕಾರಣಕ್ಕೆ ಈ ಸಿನಿಮಾದ ಮೇಲೆ ವಿವಾದದ ದನಿಗಳು ಏಳುತ್ತಿವೆ.
ಇತ್ತೀಚೆಗೆ ಎಕೆ v/s ಎಕೆ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಟ್ರೈಲರ್ನಲ್ಲಿ ವಾಯುಸೇನೆಯ ಸಮವಸ್ತ್ರ ಧರಿಸಿರುವ ಅನಿಲ್ ಕಪೂರ್ ವಾಯುಸೇನೆ ಗೌರವಕ್ಕೆ ಧಕ್ಕೆ ತರುವಂತಹ ಮಾತುಗಳನ್ನು ಆಡಿದ್ದಾರೆ.
ಹಾಗೆ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡಿರೋದು ವಿವಾದಕ್ಕೆ ಕಾರಣವಾಗಿದೆ. ಸೇನೆ ಗೌರವಕ್ಕೆ ಧಕ್ಕೆ ತರುವ ಸೀನ್ಗಳನ್ನು ತೆಗೆದು ಹಾಕುವಂತೆ ಭಾರತೀಯ ವಾಯು ಸೇನೆ ಚಿತ್ರತಂಡಕ್ಕೆ ಆಗ್ರಹಿಸಿದೆ.
ಟ್ರೈಲರ್ನಲ್ಲಿ ವಾಯುಸೇನೆಯ ಸಮವಸ್ತ್ರ ಧರಿಸಿರುವ ಅನಿಲ್ ಕಪೂರ್, ಅನುರಾಗ್ ಕಶ್ಯಪ್ರನ್ನು ಕೆಟ್ಟ ಭಾಷೆಯಲ್ಲಿ ಬೈಯುತ್ತಾರೆ. ಅಲ್ಲದೆ ಅನುರಾಗ್ ಕಶ್ಯಪ್ ಅವರನ್ನು ಕಾಲಿನಿಂದ ಒದೆಯುತ್ತಾರೆ. ಆದ್ರೆ, ವಾಯುಸೇನೆಯ ಸಮವಸ್ತ್ರ ಧರಿಸಿದ ವ್ಯಕ್ತಿ ಈ ರೀತಿ ವರ್ತಿಸುವಂತಿಲ್ಲ. ಆದ್ದರಿಂದ ಕೆಲವೊಂದಿಷ್ಟು ದೃಶ್ಯ ಸಿನಿಮಾದಿಂದ ತೆಗೆಯಬೇಕು ಎಂದು ಐಎಎಫ್ ತಿಳಿಸಿದೆ.
ಕ್ಷಮೆ ಕೇಳಿದ ಅನಿಲ್ ಕಪೂರ್ :ಇದೀಗ ವಿಡಿಯೋ ಒಂದನ್ನ ಬಿಡುಗಡೆ ಮಾಡಿರುವ ಅನಿಲ್ ಕಪೂರ್, ವಿನಮ್ರತೆಯಿಂದ ವಾಯುಸೇನೆ ಬಳಿ ಕ್ಷಮೆಯಾಚಿಸಿದ್ದಾರೆ. ವಿಡಿಯೋ ಒಂದನ್ನ ಟ್ವಿಟರ್ನಲ್ಲಿ ಶೇರ್ ಮಾಡಿರುವ ಅನಿಲ್ ಕಪೂರ್.. ನನ್ನ ಚಿತ್ರ ಎಕೆ ವರ್ಸಸ್ ಎಕೆ ಟ್ರೈಲರ್ ಕೆಲವರನ್ನ ಕೆರಳಿಸಿದೆ ಎನ್ನಲಾಗುತ್ತಿದೆ. ಅಲ್ಲದೆ ಕೆಟ್ಟ ಭಾಷೆ ಬಳಸಿ ಭಾರತೀಯ ವಾಯುಪಡೆಗೆ ಗೌರವಕ್ಕೆ ಧಕ್ಕೆ ತಂದಿರುವುದರಿಂದ ವಿನಮ್ರದಿಂದ ಕ್ಷಮೆಯಾಚಿಸಲು ಬಯಸುತ್ತೇನೆ ಎಂದಿದ್ದಾರೆ.