ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಕಮಲಿಯಲ್ಲಿ ನೆಗೆಟಿವ್ ಪಾತ್ರದಾರಿ ಅನಿಕಾ ಅಲಿಯಾಸ್ ರಚನಾ ಸ್ಮಿತ್ ಅವರು ಮಾಡೆಲಿಂಗ್ ಮೂಲಕ ಕಿರುತೆರೆಗೆ ಬಂದಿದ್ದಾರೆ.
ಮಾಡೆಲಿಂಗ್ ಮೂಲಕ ಕಿರುತೆರೆಗೆ ಬಂದ ‘ಕಮಲಿ’ ಯ ವಿಲನ್! - ಬೆಂಗಳೂರಿನವರಾದ ರಚನಾ
ಬೆಂಗಳೂರಿನವರಾದ ರಚನಾ ಅಲಿಯಾಸ್ ಅನಿಕಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಕಮಲಿಯಲ್ಲಿ ನೆಗೆಟಿವ್ ಪಾತ್ರವನ್ನು ಮಾಡುತ್ತಿದ್ದಾರೆ. ಇವರು ಮಾಡೆಲಿಂಗ್ ಮೂಲಕ ಕಿರುತೆರೆಗೆ ಬಂದಿದ್ದಾರೆ.
ಕಿರುತೆರೆಯಲ್ಲಿ ಇದೀಗ ಸದ್ದು ಮಾಡುತ್ತಿರುವ ಧಾರವಾಹಿಗಳಲ್ಲಿ ಕಮಲಿ ಕೂಡ ಒಂದು. ಇದರಲ್ಲಿ ನೆಗೆಟಿವ್ ರೋಲ್ನಲ್ಲಿ ನಟಿಸುವ ಮೂಲಕ ತಮ್ಮ ಕೀರ್ತಿಯನ್ನು ಹೆಚ್ಚಿಸಿಕೊಂಡಿದ್ದಾರೆ ರಚನಾ ಸ್ಮಿತ್. ಯಾವುದೇ ಪಾತ್ರ ಕೊಟ್ಟರೂ ನಟನೆಗೆ ಸೈ ಎನ್ನುವ ರಚನಾ, ಮಾಡೆಲಿಂಗ್ ಮೂಲಕ ಕಿರುತೆರೆಗೆ ಬಂದವರು.
ಮೂಲತಃ ಬೆಂಗಳೂರಿನವರಾದ ರಚನಾ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಾಗ ಕೇವಲ 17 ವರ್ಷವಂತೆ. ಇದಾದ ಬಳಿಕ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಮೊದಲಿಗೆ ಕಿಚ್ಚ ಸುದೀಪ್ ಅಭಿನಯದ ವರದನಾಯಕ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದರು. ನಂತರದಲ್ಲಿ ವಿಕ್ಟರಿ ಹಾಗೂ ಗೆಸ್ಟ್ ಹೌಸ್ ಸಿನಿಮಾದಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಹಾಗೂ ತೆಲುಗು ಭಾಷೆಯ ಚಿತ್ರಗಳಲ್ಲಿ ನಟಿಸುವ ಆಸೆ ಹೊಂದಿರುವ ರಚನಾ, ಇದೀಗ ಸದ್ಯಕ್ಕೆ ಕಮಲಿಯಲ್ಲಿ ಅನಿಕಾಳಾಗಿ ಮಿಂಚುತ್ತಿದ್ದಾರೆ.