ಒಂದೂವರೆ ದಶಕದಲ್ಲಿ ಬರೋಬ್ಬರಿ 24 ಚಿತ್ರಕ್ಕೆ ಬಣ್ಣ ಹಚ್ಚಿರುವ ನೆನಪಿರಲಿ ಪ್ರೇಮ್,ಇದೀಗ 25ನೇ ಸಿನಿಮಾ 'ಪ್ರೇಮಂ ಪೂಜ್ಯಂ'ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಮತ್ತೆ ಪ್ರೀತಿ ಹಂಚಲು ಬರ್ತಿರೋ ಲವ್ಲಿ ಸ್ಟಾರ್, ರಿಯಲ್ ಲೈಫ್ನಲ್ಲೂ ಪ್ರೀತಿ-ಮಮತೆ ಧಾರೆಯೆರೆಯುತ್ತಿದ್ದಾರೆ.
ವಿಶೇಷ ಚೇತನರೊಂದಿಗೆ ಪ್ರೇಮ್ ಹುಟ್ಟುಹಬ್ಬ...ಮಕ್ಕಳ ಕೈಯಿಂದ ಮಾಡಿಸಿದ್ರು ದೇವರು ಮೆಚ್ಚುವ ಕೆಲಸ - undefined
ನೆನಪಿರಲಿ ಚಿತ್ರದ ನಟ ಪ್ರೇಮ್ ವಿಶೇಷಚೇತನ ಮಕ್ಕಳೊಂದಿಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಮಕ್ಕಳ ಕೈಯಿಂದಲೇ ತಮ್ಮ ಹೊಸ ಚಿತ್ರದ 'ಪ್ರೇಮಂ ಪೂಜ್ಯಂ' ಮೋಷನ್ ಪೋಸ್ಟರ್ ರಿಲೀಸ್ ಮಾಡಿಸಿದ್ದಾರೆ.
![ವಿಶೇಷ ಚೇತನರೊಂದಿಗೆ ಪ್ರೇಮ್ ಹುಟ್ಟುಹಬ್ಬ...ಮಕ್ಕಳ ಕೈಯಿಂದ ಮಾಡಿಸಿದ್ರು ದೇವರು ಮೆಚ್ಚುವ ಕೆಲಸ](https://etvbharatimages.akamaized.net/etvbharat/images/768-512-3050917-thumbnail-3x2-pream.jpg)
ಹೌದು, ನಿನ್ನೆ ವಿಶೇಷ ಚೇತನ ಮಕ್ಕಳೊಟ್ಟಿಗೆ ತಮ್ಮ ಹುಟ್ಟಹಬ್ಬ ಸೆಲಬ್ರೇಟ್ ಮಾಡಿರುವ ಪ್ರೇಮ್, ತಮ್ಮ ದತ್ತು ಮಕ್ಕಳ ಕೈಯಲ್ಲಿ 'ಪ್ರೇಮಂ ಪೂಜ್ಯಂ' ಮೋಷನ್ ಪೋಸ್ಟರ್ ರಿಲೀಸ್ ಮಾಡಿಸಿದ್ದಾರೆ.
ಇನ್ನು ಈಗಾಗಲೇ 'ಪ್ರೇಮಂ ಪೂಜ್ಯಂ'ನ ಫಸ್ಟ್‌ಲುಕ್ ಕುತೂಹಲ ಹೆಚ್ಚಿಸಿತ್ತು. ಈಗ ರಿಲೀಸ್ ಆಗಿರೋ ಮೋಷನ್ ಪೋಸ್ಟರ್‌ನಲ್ಲಿ ಸ್ಟೈಲಿಶ್ ಬ್ಯುಸಿನೆಸ್ ಮ್ಯಾನ್ ಲುಕ್ನಲ್ಲಿ ಪ್ರೇಮ್ ಕಾಣಿಸಿಕೊಂಡಿದ್ದಾರೆ. ತಮ್ಮ ಗೆಟಪ್ನಲ್ಲಿ ಫುಲ್ ಚೇಂಜ್ ಆಗಿರೋ ಪ್ರೇಮ್, ತಮ್ಮ ಸಿನಿ ಕರಿಯರ್ನಲ್ಲಿ ಈ ಚಿತ್ರ ಮೈಲಿಗಲ್ಲಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾದಲ್ಲಿ ಪ್ರೇಮ್ ನಾಲ್ಕು ಗೆಟಪ್ಗಳಲ್ಲಿ ಕಾಣಿಸಿಕೊಳ್ಳಲಿದ್ದು, ಡಾ.ರಾಘವೇಂದ್ರ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.