ಸಲ್ಮಾನ್ ಖಾನ್ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಆಗ್ತಾನೆ ಇರ್ತಾರೆ. ತಮ್ಮ ಸಿನಿಮಾ ಪ್ರಚಾರದಲ್ಲಿರಬಹುದು ಅಥವಾ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುವುದರಲ್ಲಿರಬಹುದು. ಆದ್ರೆ ಈ ಬಾರಿ ಸಲ್ಮಾನ್ ಖಾನ್ ವೈರಲ್ ಆಗ್ತಿರೋದು ಆ ಒಂದು ವಿಚಾರದಿಂದ.
ಸಲ್ಲು ಇತ್ತೀಚೆಗೆ ಅಭಿಮಾನಿಯಬ್ಬನ ಮೊಬೈಲ ಅನ್ನು ಸಿಟ್ಟಿನಿಂದ ಕಿತ್ತುಕೊಂಡಿದ್ದಾರೆ. ಗೋವಾ ವಿಮಾನ ನಿಲ್ದಾಣದಲ್ಲಿ ಸಲ್ಮಾನ್ಖಾನ್ ಅವರ ಅನುಮತಿ ಪಡೆಯದೇ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯತ್ನಿಸಿದ ಅಭಿಮಾನಿಯ ಫೋನ್ ಅನ್ನು ಕಸಿದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.