'ಅಂದವಾದ' ಸಿನಿಮಾ, ಅಪ್ಪಟ ಹೊಸಬರ ತಂಡವೊಂದು ಸೇರಿಕೊಂಡ ಮಾಡಿರುವ ಸಿನಿಮಾ. ಎಲ್ಲಾ ಆ್ಯಂಗಲ್ನಿಂದಲೂ ಜಾಗ್ರತೆ ವಹಿಸಿ, ಕನ್ನಡಿಗರ ಮನ ಗೆಲ್ಲಲೇಬೇಕು, ಚೊಚ್ಚಲ ಪ್ರಯತ್ನದಲ್ಲಿ ನಿಲ್ಲಲೇಬೇಕು ಎಂದು ಶ್ರಮ ಹಾಕಿರುವ ಮುದ್ದಾದ ಪ್ರೇಮ ಕಹಾನಿ ಇದು.
'ಅಂದವಾದ' ಸಿನಿಮಾಗೆ ತಲೆದೂಗಿದ ಪ್ರೇಕ್ಷಕ, ರೇಟಿಂಗ್‌ನಲ್ಲೂ ಮುಂದಿದೆ ಪ್ರೇಮ ಕಹಾನಿ - ಅಂದವಾದ ಚಿತ್ರಕ್ಕೆ ಐಎಂಬಿಡಿಯಲ್ಲಿ 3ನೇ ಸ್ಥಾನ
ಅಪ್ಪಟ ಸ್ವಮೇಕ್ ಆಗಿರುವ ಈ ಸಿನಿಮಾದಲ್ಲಿ ಸೀನ್ ಟು ಸೀನ್ ಹೊಸತನ ಎದ್ದು ಕಾಣುತ್ತಿದೆ.
!['ಅಂದವಾದ' ಸಿನಿಮಾಗೆ ತಲೆದೂಗಿದ ಪ್ರೇಕ್ಷಕ, ರೇಟಿಂಗ್‌ನಲ್ಲೂ ಮುಂದಿದೆ ಪ್ರೇಮ ಕಹಾನಿ](https://etvbharatimages.akamaized.net/etvbharat/prod-images/768-512-4903630-thumbnail-3x2-andavada1.jpg)
ಕಳೆದ ವಾರವಷ್ಟೇ ಪ್ರೇಕ್ಷಕರ ಎದುರಿಗೆ ಬಂದಿರುವ 'ಅಂದವಾದ' ಸಿನಿಮಾ ಹದಿ, ಹರೆಯದ ಯುವಜನತೆಯನ್ನು ಆಕರ್ಷಿಸುತ್ತಿದೆ. ಅಪ್ಪಟ ಹಸಿರು, ಮಳೆ ಹಿನ್ನೆಲೆಯಲ್ಲಿ ಚಿತ್ರಿಸಿರುವ ಮುದ್ದಾದ ಪ್ರೇಮಕಥೆ. ಜೈ ಎಂಬ ಹ್ಯಾಂಡ್ಸಮ್ ಹುಡುಗ ಮತ್ತು ಅನುಷಾ ರಂಗನಾಥ್ ಎಂಬ ಬ್ಯೂಟಿಫುಲ್ ಹುಡುಗಿಯ ಕಾಂಬಿನೇಷನ್, ಈ ಸಿನಿಮಾಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಅಪ್ಪಟ ಸ್ವಮೇಕ್ ಆಗಿರುವ ಈ ಸಿನಿಮಾದಲ್ಲಿ ಸೀನ್ ಟು ಸೀನ್ ಹೊಸತನ ಎದ್ದು ಕಾಣುತ್ತಿದೆ. ವಿಶೇಷ ಎಂದರೆ ಸಿನಿಮಾ ಹೊಸಬರದ್ದೇ ಆದರೂ IMDB ರೇಟಿಂಗ್ನಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ.
ಪರಭಾಷಾ ದೊಡ್ಡ ಸಿನಿಮಾಗಳ ಹಾವಳಿಯ ನಡುವೆ ಕನ್ನಡದ ಈ ಸಿನಿಮಾ ಗಮನ ಸೆಳೆಯುತ್ತಿರುವುದು ನಿಜಕ್ಕೂ ಸಂತೋಷದ ವಿಷಯ. ಮೊದಲ ನಿರ್ದೇಶನದಲ್ಲೇ ಛಲದಿಂದ ಸಾಧನೆ ಮಾಡಿ ಗೆದ್ದಿರುವ ನಿರ್ದೇಶಕ ಚಲ ರಾಜ್ಯದ ಗಮನ ಸೆಳೆದಿದ್ದಾರೆ. ಈ ಸಿನಿಮಾಗೆ ಪ್ರೇಕ್ಷಕರು ಹೀಗೆ ಪ್ರೋತ್ಸಾಹ ನೀಡಿದರೆ ಇದು ಮತ್ತೊಂದು ಮುಂಗಾರು ಮಳೆ ಸಿನಿಮಾ ಆಗುವುದರಲ್ಲಿ ಸಂದೇಹವೇ ಇಲ್ಲ. 'ಮುಂಗಾರು ಮಳೆ' ಚಿತ್ರಕ್ಕೆ ಕೂಡಾ ಇದೇ ರೀತಿಯ ಪ್ರತಿಕ್ರಿಯೆ ದೊರೆತಿತ್ತು. ಜನರು ಥಿಯೇಟರ್ಗೆ ನುಗ್ಗಿ ಬಂದಿದ್ದು ಮೂರು ವಾರಗಳ ನಂತರ. ನಂತರ ಇಡೀ ಕರ್ನಾಟಕವನ್ನೇ ಆ ಗುಂಗಲ್ಲಿ ಮುಳುಗಿಸಿತ್ತು.