ಅನಸೂಯ ಭಾರಧ್ವಾಜ್ ತೆಲುಗು 'ಜಬರ್ದಸ್ತ್' ಕಾರ್ಯಕ್ರಮದ ನಿರೂಪಕಿಯಾಗಿ ಹೆಸರು ಮಾಡಿದವರು. 'ರಂಗಸ್ತಲಂ' ಚಿತ್ರದಲ್ಲಿ ರಂಗಮತ್ತೆ ಪಾತ್ರದಲ್ಲಿ ನಟಿಸುವ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದ ಅನುಸೂಯ ನಂತರ ಕೂಡಾ ಅನೇಕ ಸಿನಿಮಾಗಳಲ್ಲಿ ನಟಿಸಿ ಒಳ್ಳೆ ಹೆಸರು ಸಂಪಾದಿಸಿದ್ದಾರೆ. ಇದೀಗ ಅವರು ತಮಿಳು ಸಿನಿಮಾದಲ್ಲಿ ಕೂಡಾ ನಟಿಸುತ್ತಿದ್ದಾರೆ ಎನ್ನಲಾಗಿದೆ.
ಸಿಲ್ಕ್ ಸ್ಮಿತಾ ಬಯೋಪಿಕ್ನಲ್ಲಿ ತೆಲುಗು ನಟಿ ಅನಸೂಯ...? - Tragic actress Silk smita
ವಿಜಯ್ ಸೇತುಪತಿ ಹಾಗೂ ತಾವು ಕನ್ನಡಿಯನ್ನು ನೋಡಿಕೊಳ್ಳುತ್ತಿರುವ ಫೋಟೋಗಳನ್ನು ಅನಸೂಯ ಭಾರಧ್ವಾಜ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಸಿಲ್ಕ್ ಸ್ಮಿತಾ ಅವರೇ ಸ್ಫೂರ್ತಿ ಎಂದು ಒಂದು ಫೋಟೋಗೆ ಕ್ಯಾಪ್ಷನ್ ನೀಡಿದ್ದಾರೆ. ಇದನ್ನು ನೋಡಿದ ನೆಟಿಜನ್ಸ್ ಬಹುಶ: ಅನಸೂಯ, ಸಿಲ್ಕ್ಸ್ಮಿತಾ ಬಯೋಪಿಕ್ನಲ್ಲಿ ನಟಿಸುತ್ತಿರಬಹುದು ಎನ್ನುತ್ತಿದ್ದಾರೆ.
ದುರಂತ ನಟಿ ಸಿಲ್ಕ್ಸ್ಮಿತಾ ಬಯೋಪಿಕ್ನಲ್ಲಿ ಅನಸೂಯ ಭಾರಧ್ವಾಜ್ ನಟಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದ್ದು ಇದಕ್ಕೆ ಸಾಕ್ಷಿ ಎಂಬಂತೆ ಅನಸೂಯ ಇತ್ತೀಚೆಗೆ ಚೆನ್ನೈಗೆ ಹೋಗಿ ಬಂದಿದ್ದಾರೆ ಎನ್ನಲಾಗಿದೆ. ಖ್ಯಾತ ತಮಿಳು ನಟ ವಿಜಯ್ ಸೇತುಪತಿ ಜೊತೆ ತೆಗೆಸಿಕೊಂಡ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ''ವಿಜಯ್ ಸೇತುಪತಿಯಂತ ಅದ್ಭುತ ನಟನನ್ನು ಭೇಟಿಯಾಗಿದ್ದು ಬಹಳ ಸಂತೋಷವಾಯ್ತು'' ಎಂದು ಒಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ಮತ್ತೊಂದು ಪೋಸ್ಟ್ನಲ್ಲಿ ತಮ್ಮನ್ನು ಕನ್ನಡಿಯಲ್ಲಿ ನೋಡಿಕೊಳ್ಳುತ್ತಿರುವ ಫೋಟೋವನ್ನು ಷೇರ್ ಮಾಡಿದ್ದಾರೆ. ಈ ಫೋಟೋಗಳಿಗೆ ಸಿಲ್ಕ್ಸ್ಮಿತಾ ಅವರೇ ಸ್ಫೂರ್ತಿ ಎಂದು ಅನಸೂಯ ಬರೆದುಕೊಂಡಿದ್ದಾರೆ.
ಅನುಸೂಯ ಅವರ ಪೋಸ್ಟ್ ನೋಡಿ, ಅವರು ಸಿಲ್ಕ್ಸ್ಮಿತಾ ಬಯೋಪಿಕ್ನಲ್ಲಿ ನಟಿಸುತ್ತಿರಬಹುದಾ ಎಂದು ನೆಟಿಜನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಈ ವಿಚಾರವಾಗಿ ಅನಸೂಯ ಆಗಲೀ ಇತರರಾಗಲೀ ಅಧಿಕೃತವಾಗಿ ಪ್ರಕಟಿಸಿಲ್ಲ. ನಿಜ ಏನು ಎಂಬುದು ಇನ್ನು ಕೆಲವೇ ದಿನಗಳಲ್ಲಿ ತಿಳಿಯಲಿದೆ.