ಕರ್ನಾಟಕ

karnataka

ETV Bharat / sitara

'ವೀಕ್​​ಎಂಡ್​​​​​​​' ಮೂಡ್​​​​​​​​​​​​ನಲ್ಲಿ ಎವರ್​​​​​​​​​​​​​​ಗ್ರೀನ್ ಹೀರೋ - undefined

ಶೃಂಗೇರಿ ಸುರೇಶ್​​​​​​ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ 'ವೀಕ್​ಎಂಡ್​​' ಸಿನಿಮಾ ಇದೇ 24 ರಂದು ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಅನಂತ್​​ನಾಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಅನಂತ್ ನಾಗ್

By

Published : May 15, 2019, 2:35 PM IST

ಹೊಸಬರ ಹೊಸ ಕನಸು 'ವೀಕ್​ಎಂಡ್​​' ಸಿನಿಮಾದ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ. ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಭಾರೀ ಥ್ರಿಲ್​​ನಲ್ಲಿದೆ. ಹಿರಿಯ ನಟ ಅನಂತ್​​​ನಾಗ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಅನಂತ್ ನಾಗ್

ಮೇ 24ರಂದು ಸಿನಿಮಾ ಬಿಡುಗಡೆ ಆಗುತ್ತಿದೆ. ಲವ್, ಸೆಂಟಿಮೆಂಟ್, ಸಸ್ಪೆನ್ಸ್, ಥ್ರಿಲ್, ಕಾಮಿಡಿ, ತಾತ - ಮೊಮ್ಮಗನ ವಿಶಿಷ್ಟ ಕೆಮಿಸ್ಟ್ರಿಯೊಂದಿಗೆ ಅತ್ಯಂತ ಪ್ರಸ್ತುತ ಸಮಸ್ಯೆ ಹಾಗೂ ಲೈಫ್​​ಸ್ಟೈಲ್​​​​​ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ನಿರ್ದೇಶಕ ಶೃಂಗೇರಿ ಸುರೇಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿ ಮಂಜುನಾಥ್​​​. ಡಿ ನಿರ್ಮಿಸಿದ್ದಾರೆ. ಕವಲುದಾರಿ, ನಟಸಾರ್ವಭೌಮ ಮುಂತಾದ ಚಿತ್ರಗಳನ್ನು ವಿತರಣೆ ಮಾಡಿದ ಧೀರಜ್ ಎಂಟರ್​​​ಪ್ರೈಸಸ್​​​ 'ವೀಕ್​​​​​​ಎಂಡ್​​​' ಚಿತ್ರವನ್ನು ಹಂಚಿಕೆ ಮಾಡುತ್ತಿದೆ.

ಅನಂತ್ ನಾಗ್, ಮಿಲಿಂದ್

ಈಗಾಗಲೇ ವಿಭಿನ್ನ ಹಾಡುಗಳ ಮೂಲಕ ಗಮನ ಸೆಳೆದಿರುವ ಈ ಚಿತ್ರದಲ್ಲಿ, ಅನಂತ್​​​​​​​​​​​​​​​​​ನಾಗ್ ವಿಭಿನ್ನ ಮತ್ತು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಹೊಸ ಪ್ರತಿಭೆಗಳಾದ ಮಿಲಿಂದ್, ಸಂಜನಾ ಬುರ್ಲಿ ನಾಯಕ - ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ನಾಗಭೂಷಣ್, ಗೋಪಿನಾಥ್ ಭಟ್ ಮುಂತಾದ ಪ್ರತಿಭಾವಂತರ ದೊಡ್ಡ ತಂಡವೇ ಈ ಚಿತ್ರದಲ್ಲಿರುವುದು ವಿಶೇಷ.

For All Latest Updates

TAGGED:

ABOUT THE AUTHOR

...view details