ಅನಂತ್ನಾಗ್ ಅವರು ಎಂತಹ ಅದ್ಭುತವಾದ ನಟ ಎಂಬುದು 80ರ ದಶಕದಲ್ಲೇ ಪ್ರೂವ್ ಆಗಿದೆ. ಆದರೆ ಇತ್ತೀಚಿನ ಅವರ ಸಿನಿಮಾಗಳನ್ನು ನೋಡಿ ಥಿಯೇಟರ್ನಿಂದ ಹೊರಬಂದವರಿಗೆ ಅವರ ಮನೋಜ್ಞ ಅಭಿನಯವೇ ಕಾಡುವಂತಾಗಿದೆ.
ಒದ್ದೆ ಕಣ್ಣಲ್ಲಿ ಮಗಳನ್ನು ಹುಡುಕುತ್ತಾ ಹೊರಟ ಅನಂತ್ನಾಗ್! - ಕವಲುದಾರಿ ಸಿನಿಮಾ
ಪಿಆರ್ಕೆ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ 'ಕವಲುದಾರಿ' ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ. 'ಇದೇ ದಿನ... ಆ ನೆನ್ನೆ ನಾಳೆ' ಈ ಹಾಡಿನಲ್ಲಿ ಅನಂತ್ನಾಗ್ ಕಳೆದುಕೊಂಡ ಮಗಳನ್ನು ಹುಡುಕುವ ಎಮೋಶನಲ್ ದೃಶ್ಯಗಳನ್ನು ನೋಡಬಹುದು.
![ಒದ್ದೆ ಕಣ್ಣಲ್ಲಿ ಮಗಳನ್ನು ಹುಡುಕುತ್ತಾ ಹೊರಟ ಅನಂತ್ನಾಗ್!](https://etvbharatimages.akamaized.net/etvbharat/images/768-512-2675006-7-cf3f7f95-df29-4d1c-b6c0-57f9046826f5.jpg)
'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನಿಮಾದಲ್ಲಿ ಜ್ಞಾಪಕ ಶಕ್ತಿಯನ್ನು ಕಳೆದುಕೊಂಡ ತಂದೆ ಪಾತ್ರದಲ್ಲಿ ಅನಂತ್ನಾಗ್ ಎಲ್ಲರಿಗೂ ಇಷ್ಟವಾಗಿದ್ದರು. ಇದೀಗ 'ಕವಲುದಾರಿ' ಸಿನಿಮಾದಲ್ಲಿ ಅನಂತ್ ನಾಗ್ ಮಗಳನ್ನು ಕಳೆದುಕೊಂಡ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪುನೀತ್ ರಾಜ್ಕುಮಾರ್ ಅವರ ಪಿಆರ್ಕೆ ಬ್ಯಾನರ್ ಅಡಿ ತಯಾರಾದ 'ಕವಲುದಾರಿ' ಸಿನಿಮಾದ 'ನಿಗೂಢ ನಿಗೂಢ ಪ್ರಯಾಣ' ಹಾಡು ಕೇಳುಗರನ್ನು ಮತ್ತೊಮ್ಮೆ ಕೇಳುವ ಹಾಗೆ ಮಾಡುತ್ತಿರುವ ಬೆನ್ನಲ್ಲೇ ಸಿನಿಮಾದ ಎರಡನೇ ಹಾಡು ಬಿಡುಗಡೆ ಆಗಿದೆ.
'ಇದೇ ದಿನ... ಆ ನೆನ್ನೆ ನಾಳೆ' ಎಂಬ ಪದಗಳಿಂದ ಶುರುವಾಗುವ ಎಮೋಷನಲ್ ಹಾಡಿನಲ್ಲಿ ಅನಂತ್ನಾಗ್ ಕಣ್ಣೀರು ಹಾಕುತ್ತಾ ಮಗಳನ್ನು ಹುಡುಕುತ್ತಾ ಸಾಗುವುದನ್ನು ನೋಡಬಹುದು. ಧನಂಜಯ್ ಈ ಹಾಡಿನ ಸಾಹಿತ್ಯ ಬರೆದಿದ್ದು, ಸಿದ್ದಾಂತ್ ಸುಂದರ್ ಈ ಎಮೋಶನಲ್ ಗೀತೆಯನ್ನು ಹಾಡಿದ್ದಾರೆ. ಚರಣ್ ರಾಜ್ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ನಿರ್ಮಾಪಕ ಹೇಮಂತ್ ರಾವ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.