ಹಿಂದಿಯ ಜನಪ್ರಿಯ ಕಾರ್ಯಕ್ರಮ 'ಕೌನ್ ಬನೇಗಾ ಕರೋಡ್ಪತಿ'ಯಲ್ಲಿ ಉಡುಪಿಯ ವಿದ್ಯಾರ್ಥಿ ಅನಾಮಯ ಯೋಗೇಶ್ ದಿವಾಕರ್ 50 ಲಕ್ಷ ಗೆದ್ದಿದ್ದಾನೆ.
ಕಾರ್ಯಕ್ರಮದಲ್ಲಿ 15 ಪ್ರಶ್ನೆಗಳ ಪೈಕಿ 14 ಪ್ರಶ್ನೆಗಳಿಗೆ ಉತ್ತರಿಸಿದ ಅನಾಮಯ ಸ್ಟೂಡೆಂಟ್ ವೀಕ್ ಸ್ಪೆಷಲ್ನಲ್ಲಿ ಭಾಗವಹಿಸಿ ಲಕ್ಷಾಧಿಪತಿಯಾಗಿದ್ದಾರೆ. ಈ ಮೂಲಕ ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿ ಉಡುಪಿಗೆ ಕೀರ್ತಿ ತಂದಿದ್ದಾನೆ.
ಒಂದು ಕೋಟಿ ರೂಪಾಯಿ ಮೊತ್ತದ 12ನೇ ಪ್ರಶ್ನೆ, ಮಹಾಭಾರತದ ಕುರುಕ್ಷೇತ್ರದ ಯುದ್ಧದಲ್ಲಿ ಬದುಕುಳಿದು ಯುಧಿಷ್ಠಿರನ ಅಶ್ವಮೇಧ ಯಾಗದಲ್ಲಿ ಪಾಲ್ಗೊಂಡಿದ್ದ ಕರ್ಣನ ಮಗ ಯಾರು ಎಂಬುದಾಗಿತ್ತು. ಈ ಪ್ರಶ್ನೆಗೆ ಅನಾಮಯ ಬಳಿ ಒಂದು ಲೈಫ್ ಲೈನ್ ಇದ್ದರೂ ಕೂಡಾ ಉತ್ತರ ಸಿಗಲಿಲ್ಲ, ಕಾರಣ ಸ್ಪರ್ಧೆಯಿಂದ ಹಿಂದೆ ಸರಿದು 50 ಲಕ್ಷ ರೂ. ಬಹುಮಾನ ಗೆದ್ದಿದ್ದರು.
ಕೆಬಿಸಿಯ ಈ ವಿಶೇಷ ಸಂಚಿಕೆಯಲ್ಲಿ ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ ಇಡೀ ದೇಶದಲ್ಲಿ ಆಯ್ಕೆಯಾಗಿದ್ದು ಕೇವಲ ಎಂಟು ಮಕ್ಕಳು. ಅವರಲ್ಲಿ ಅನಾಮಯ ಕೂಡ ಒಬ್ಬನಾಗಿದ್ದ.
ಯೋಗೇಶ್ ದಿವಾಕರ್ ಮತ್ತು ಅನುರಾಧಾ ದಂಪತಿಗಳ ಎರಡನೇ ಮಗನಾದ ಅನಾಮಯ ಉಡುಪಿಯ ವಿದ್ಯೋದಯ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದಾನೆ. ಕೀಬೋರ್ಡ್, ತಬಲಾ, ವೈಲಿನ್ ಅಭ್ಯಾಸ ಮಾಡುತ್ತಿದ್ದು, ಉಡುಪಿಯ ಅಜ್ಜರಕಾಡಿನಲ್ಲಿ ವಾಸವಾಗಿದ್ದಾನೆ.