ಸ್ಯಾಂಡಲ್ವುಡ್ "ಗೋಲ್ಡನ್ ಕ್ವೀನ್" ಅಂತಾನೆ ಹೆಸರು ಮಾಡಿರುವ ಅಮೂಲ್ಯ ಇಂದು 26ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆದ್ರೆ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟಿಗೆ ನೇರವಾಗಿ ವಿಶ್ ಮಾಡಯವ ಭಾಗ್ಯ ಸಿಕ್ಕಿಲ್ಲ.
ಯಾಕಂದ್ರೆ ನನಗೆ ಕಾರಣಾಂತರಗಳಿಂದ ನಿಮ್ಮ ಜೊತೆ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಳ್ಳಲು ಆಗುತ್ತಿಲ್ಲ. ಆದ್ರೆ ನಿಮ್ಮ ಅಭಿಮಾನಕ್ಕೆ ನಾನು ಚಿರರುಣಿಯಾಗಿದ್ದೇನೆ ಅಂತಾ ಅಮೂಲ್ಯ ಹೇಳಿದ್ದಾರೆ.
ಈ ಬಗ್ಗೆ ನಿನ್ನೆ ಟ್ವೀಟ್ ಮಾಡಿರುವ ಚೆಲುವಿನ ಚಿತ್ತಾರದ ಬೆಡಗಿ, ನಾನು ಕಾರಣಾಂತರಗಳಿಂದ ನಿಮಗೆ ಸಿಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನೀವಿರುವ ಸ್ಥಳದಿಂದಲೇ ನನಗೆ ಶುಭ ಹಾರೈಸಿ ಎಂಬ ಕೋರಿಕೆ ನನ್ನದು. ನಿಮ್ಮ ಪ್ರೀತಿ, ವಿಶ್ವಾಸ ಸದಾ ಇರಲಿ. ನಿಮ್ಮ ಪ್ರೀತಿಯ ಅಮೂಲ್ಯ ಜಗದೀಶ್ ಅಂತ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಚೆಲುವಿನ ಚಿತ್ತಾರದ ಮೂಲಕ ನಾಯಕ ನಟಿಯಾಗಿ ಅಮೂಲ್ಯ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿದ್ದು, ಸಿನಿಮಾ ಬಿಗ್ ಹಿಟ್ ಆಗಿತ್ತು.