ಕರ್ನಾಟಕ

karnataka

ETV Bharat / sitara

ಕಸ್ತೂರಿ ನಿವಾಸದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ‌ ಅಮೃತ - ಅಮೃತಾ ರಾಮಮೂರ್ತಿ

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಸ್ತೂರಿ ನಿವಾಸ ಧಾರಾವಾಹಿಯಲ್ಲಿ ನಾಯಕಿ ಮೃದುಲಾ ಆಗಿ ನಟಿಸುತ್ತಿದ್ದ ವರ್ಷಾ ನಟನೆಗೆ ಬಾಯ್ ಹೇಳಿದ್ದು, ಆ ಜಾಗಕ್ಕೆ ಗುಂಗುರು ಕೂದಲಿನ ಸುಂದರಿ ಅಮೃತಾ ರಾಮಮೂರ್ತಿ ಬಂದಿದ್ದಾರೆ.

amrita-who-started-the-second-innings-through-the-kasturi-nivasa-serial
ಕಸ್ತೂರಿ ನಿವಾಸದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ‌ ಅಮೃತ

By

Published : Jan 30, 2020, 5:14 AM IST

ಬೆಂಗಳೂರು: ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಸ್ತೂರಿ ನಿವಾಸ ಧಾರಾವಾಹಿಯಲ್ಲಿ ನಾಯಕಿ ಮೃದುಲಾ ಆಗಿ ನಟಿಸುತ್ತಿದ್ದ ವರ್ಷಾ ನಟನೆಗೆ ಬಾಯ್ ಹೇಳಿದ್ದು, ಆ ಜಾಗಕ್ಕೆ ಗುಂಗುರು ಕೂದಲಿನ ಸುಂದರಿ ಅಮೃತಾ ರಾಮಮೂರ್ತಿ ಬಂದಿದ್ದಾರೆ.

ಕುಲವಧು ಧಾರಾವಾಹಿಯ ವಚನಾ ಆಗಿ ಕರ್ನಾಟಕದಾದ್ಯಂತ ಮನೆ ಮಾತಾಗಿದ್ದ ಅಮೃತಾ ರಾಮಮೂರ್ತಿ ಇನ್ನು ಮುಂದೆ ಮೃದುಲಾ ಆಗಿ ಕಿರುತೆರೆ ಪ್ರಿಯರ ಮನ ಸೆಳೆಯಲು ಸಜ್ಜಾಗಿದ್ದಾರೆ.

ಕಸ್ತೂರಿ ನಿವಾಸದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ‌ ಅಮೃತ.

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರಸ್ವತಿ ಲಕ್ಷ್ಮಿ ಪ್ರಿಯೆ ಧಾರಾವಾಹಿಯಲ್ಲಿ ಅಭಿನಯಿಸಿದ ಅಮೃತಾ ಮುಂದೆ ಝೀ ಕನ್ನಡದ ಮೇಘ ಮಯೂರಿ ಧಾರಾವಾಹಿಯಲ್ಲಿ ಮಯೂರಿ ಆಗಿ ಮಿಂಚಿದ್ದರು. ತದ ನಂತರ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಮಿಸ್ಟರ್ ಆ್ಯಂಡ್ ಮಿಸೆಸ್ ರಂಗೇಗೌಡ ಧಾರಾವಾಹಿಯಲ್ಲಿ ನಾಯಕಿ ಐಶ್ವರ್ಯಳಾಗಿ ನಟಿಸಿ ಸೈ ಎನಿಸಿಕೊಂಡರು.

ಕುಲವಧುವಿನ ವಚನ ಆಗಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿರುವ ಅಮೃತಾ ತೆಲುಗಿನ ಪುಟ್ಟಿಂಚಿ ಪಟ್ಟುಚೀರ ಎಂಬ ತೆಲುಗು ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಪರಭಾಷೆಯಲ್ಲೂ ತಮ್ಮ ನಟನಾ ಛಾಪನ್ನು ಮೂಡಿಸಿದ್ದಾರೆ. ಇದರ ಜೊತೆಗೆ ಕುಟುಂಬ ಗೌರವಂ ಎಂಬ ತೆಲುಗು ಧಾರಾವಾಹಿಯಲ್ಲಿ ನಟಿಸಿರುವ ಅಮೃತಾ ಕುಲವಧು ಧಾರಾವಾಹಿಯ ನಂತರ ಫೋಟೋಶೂಟ್ ಮೂಲಕ ಸಾಕಷ್ಟು ಸದ್ದು ಮಾಡಿದ್ದರು.

ವಿಭಿನ್ನ ಶೈಲಿಯ ಪೋಟೋಶೂಟ್ ಮೂಲಕ ಸುದ್ದಿ ಮಾಡುತ್ತಿದ್ದ ಅಮೃತಾ ಇದೀಗ ಮತ್ತೆ ಕಿರುತೆರೆಗೆ ಕಾಲಿಟ್ಟಿದ್ದಾರೆ. ಮೃದುಲಾ ಆಗಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರುವ ಅಮೃತಾಳ ಆಗಮನಕ್ಕೆ ಕಿರುತೆರೆ ಪ್ರಿಯರು ಕಾಯುತ್ತಿರುವುದಂತೂ ನಿಜ.

ABOUT THE AUTHOR

...view details