ಬೆಂಗಳೂರು:ಲಾಕ್ಡೌನ್ನಿಂದ ಕೆಲಸವಿಲ್ಲದೆ ಮನೆಯಲ್ಲೇ ಲಾಕ್ ಆಗಿರುವ ಅಸಂಘಟಿತ ಕನ್ನಡ ಸಿನಿಮಾ ಕಾರ್ಮಿಕರಿಗೆ ಹಾಗೂ ತಂತ್ರಜ್ಞರಿಗೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ನೆರವು ನೀಡಿದ್ದಾರೆ.
ಕನ್ನಡ ಸಿನಿ ಕಾರ್ಮಿಕರಿಗೆ 50 ಲಕ್ಷ ರೂ ನೆರವು ನೀಡಿದ ಬಿಗ್ ಬಿ - Amithab_Bhachan_help_Kannada_Film_Workers_
ಕೊರೊನಾ ಲಾಕ್ಡೌನ್ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿರುವ ಸಿನಿಮಾ ಕಾರ್ಮಿಕರಿಗೆ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ 50 ಲಕ್ಷ ರೂಪಾಯಿ ಧನಸಹಾಯ ನೀಡಿದ್ದಾರೆ.
ಕೊರೊನಾ ಭೀತಿಯಿಂದ ಸುಮಾರು 40 ದಿನಗಳಿಂದ ಚಿತ್ರರಂಗ ಬಂದ್ ಆಗಿದ್ದು, ಕೆಲಸ ಇಲ್ಲದೆ ಸಂಕಷ್ಟದಲ್ಲಿದ್ದ ಇಡೀ ಭಾರತೀಯ ಚಿತ್ರರಂಗದ ಸಿನಿಮಾ ಕಾರ್ಮಿಕರೂ ಹಾಗೂ ತಂತ್ರಜ್ಞರಿಗೆ ನೆರವು ನೀಡುವ ಸಲುವಾಗಿ ಅಮಿತಾಬ್ ಬಚ್ಚನ್, ಕಲ್ಯಾಣ್ ಜ್ಯುವೆಲರ್ಸ್ ಹಾಗೂ ಸೋನಿ ಸಂಸ್ಥೆ ಸುಮಾರು 12 ಕೋಟಿ ದೇಣಿಗೆ ಸಂಗ್ರಹಿಸಿ ಎಲ್ಲಾ ಕಾರ್ಮಿಕರಿಗೆ ಒದಗಿಸಿದೆ. ಅದರಲ್ಲಿ ಕನ್ನಡ ಸಿನಿಮಾದ ಸುಮಾರು 3,200 ಸಿನಿ ಕಾರ್ಮಿಕರಿಗೆ ತಲಾ 1,500 ರಂತೆ 50 ಲಕ್ಷ ನೆರವು ನೀಡಿದ್ದಾರೆ.
ಕಾರ್ಮಿಕರ ದಿನಾಚರಣೆ ಅಂಗವಾಗಿ ಕನ್ನಡ ಸಿನಿ ಕಾರ್ಮಿಕರಿಗೆ ತಲಾ 1,500 ರೂ ಬೆಲೆ ಬಾಳುವ ವೋಚರ್ ಅನ್ನು ಒಕ್ಕೂಟ 18 ವಿಭಾಗದ ಅಧ್ಯಕ್ಷರಿಗೆ ನೀಡಲಾಯಿತು. ಸಂಕಷ್ಟದ ಸಮಯದಲ್ಲಿ ಕಾರ್ಮಿಕರ ನೆರವಿಗೆ ನಿಂತ ಅಮಿತಾಬ್ ಬಚ್ಚನ್ ಹಾಗೂ ಕಲ್ಯಾಣ್ ಜ್ಯುವೆಲರ್ಸ್‌ಗೆ ಕನ್ನಡ ಚಿತ್ರರಂಗದ ಪರವಾಗಿ ಧನ್ಯವಾದ ಅರ್ಪಿಸಿದ್ರು. ಈ ವೇಳೆ ಒಕ್ಕೂಟದ ಅಧ್ಯಕ್ಷ ಸಾರಾ ಗೋವಿಂದ್, ಉಪಾಧ್ಯಕ್ಷ ರವಿಶಂಕರ್, ಡಬ್ಬಿಂಗ್ ಕಲಾವಿದರ ಸಂಘದ ಅಧ್ಯಕ್ಷ ರವೀಂದ್ರ ಹಾಗೂ ವಾಣಿಜ್ಯ ಮಂಡಳಿ ಗುಬ್ಬಿ ಜೈರಾಜ್ ಹಾಗೂ ಉಪಾಧ್ಯಕ್ಷ ಉಮೇಶ್ ಬಣಕಾರ್ ಉಪಸ್ಥಿತರಿದ್ದರು.