ಕರ್ನಾಟಕ

karnataka

ETV Bharat / sitara

ಎಡಗಣ್ಣಲ್ಲಿ ಕಪ್ಪು ಚುಕ್ಕೆ, ಸಡನ್ನಾಗಿ ಬಿಗ್​ ಬಿ ಅಮ್ಮನ ಸೆರಗು ನೆನೆದಿದ್ದೇಕೆ? - ಬಚ್ಚನ್​ಗೆ​​ ತಾಯಿಯನ್ನು ನೆನಪಿಸಿತು ಎಡಗಣ್ಣಿನ ಸಮಸ್ಯೆ!

ಅಮಿತಾಭ್​​ ಬಚ್ಚನ್​ ಎಡಗಣ್ಣಿನಲ್ಲಿ ಸಣ್ಣದೊಂದು ಮಚ್ಚೆ ಇದೆ. ಈ ಕಾರಣದಿಂದ ಅವರ ಎಡಗಣ್ಣು ಅದುರುತ್ತಿದೆಯಂತೆ. ಈ ಸಮಸ್ಯೆಯನ್ನು ಭಾವನಾತ್ಮಕವಾಗಿ ಟ್ವೀಟ್​​ನಲ್ಲಿ ಬರೆದುಕೊಂಡಿದ್ದಾರೆ. ಮತ್ತು ಅಮ್ಮನನ್ನು ನೆನೆದು ಭಾವುಕರಾಗಿದ್ದಾರೆ.

Amitabh Bachchan Visits Doctor Due to a Black Spot in His Left Eye
ಬಚ್ಚನ್​ಗೆ​​ ತಾಯಿಯನ್ನು ನೆನಪಿಸಿತು ಎಡಗಣ್ಣಿನ ಸಮಸ್ಯೆ!

By

Published : Jan 15, 2020, 3:30 PM IST

ಅಮಿತಾಭ್​​ ಬಚ್ಚನ್​ ಇದೀಗ ಕೊಂಚ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ವೈದ್ಯರ ಬಳಿ ಹೋಗಿದ್ದ ಬಿಗ್​ಬಿಗೆ, ಇದು ವಯೋ ಸಹಜ ಕಣ್ಣಿನ ಸಮಸ್ಯೆ ಎಂದು ಡಾಕ್ಟರ್​ ಹೇಳಿದ್ದಾರೆ.

ಅಮಿತಾಭ್​​ ಬಚ್ಚನ್​ ಎಡಗಣ್ಣಿನಲ್ಲಿ ಸಣ್ಣದೊಂದು ಮಚ್ಚೆ ಇದೆ. ಈ ಕಾರಣದಿಂದ ಅವರ ಎಡಗಣ್ಣು ಅದುರುತ್ತಿದೆಯಂತೆ. ಈ ಸಮಸ್ಯೆಯನ್ನು ಭಾವನಾತ್ಮಕವಾಗಿ ಟ್ವೀಟ್​​ನಲ್ಲಿ ಬರೆದುಕೊಂಡಿದ್ದಾರೆ.

ಬಾಲ್ಯದಲ್ಲಿ ನನ್ನ ಕಣ್ಣಿಗೆ ಸಮಸ್ಯೆ ಬಂದರೆ ಅಮ್ಮ ತನ್ನ ಸೀರೆಯ ಸೆರಗಿನಿಂದ ಶಾಖ ನೀಡಿ ಸರಿ ಪಡಿಸುತ್ತಿದ್ದರು. ಆದ್ರೆ ಈಗ ನನಗೆ ಅಮ್ಮನಿಲ್ಲ. ಆದ್ರಿಂಗ ನಾನೇ ಕರವಸ್ತ್ರವನ್ನ ಬಿಸಿ ಮಾಡಿಕೊಂಡು ಕಣ್ಣಿಗೆ ಶಾಖ ಕೊಟ್ಟುಕೊಳ್ಳುತ್ತೇನೆ. ಆದ್ರೆ ಅಮ್ಮ ಮಾಡುತ್ತಿದ್ದ ಚಿಕಿತ್ಸೆಯಂತೆ ಇದು ಇಲ್ಲ ಎಂದು ಅಮಿತಾಭ್​​ ಭಾವನಾತ್ಮಕವಾಗಿ ಟ್ವೀಟ್​​ ಮಾಡಿದ್ದಾರೆ.

ABOUT THE AUTHOR

...view details