ಕರ್ನಾಟಕ

karnataka

ETV Bharat / sitara

ಸಿನಿಮಾ ಕಾರ್ಮಿಕರಿಗೆ ಗುಡ್​ ನ್ಯೂಸ್​​​... ಇಂದು ತಪ್ಪದೇ ಕೂಪನ್​ ಪಡೆದುಕೊಳ್ಳಿ - covid 19 news

ಕನ್ನಡ ಸಿನಿಮಾ ಕಾರ್ಮಿಕರಿಗೆ ಸಹಾಯ ಹಸ್ತ ನೀಡಲು ಅಮಿತಾಭ್​ ಬಚ್ಚನ್, ಸೋನಿ ಟಿವಿ ಹಾಗೂ ಕಲ್ಯಾಣ್ ಜುವೆಲ್ಲರ್ಸ್​​ ಮುಂದೆ ಬಂದಿದೆ.

amitabh-bachchan-kalyan-jewellers-ready-to-help-china-workers
ಸಿನಿಮಾ ಕಾರ್ಮಿಕರಿಗೆ ಗುಡ್​ ನ್ಯುಸ್​..

By

Published : May 1, 2020, 10:05 AM IST

ದೇಶವೇ ಲಾಕ್ ಡೌನ್ ಆಗಿರುವ ಈ ವೇಳೆಯಲ್ಲಿ ಎಲ್ಲರೂ ಕಷ್ಟ ಪಡುತ್ತಿದ್ದಾರೆ. ಈ ನಡುವೆ ಇಂದು ಕಾರ್ಮಿಕರ ದಿನ. ದೇಶದ ಕಾರ್ಮಿಕರಿಗೆ ಈ ವರ್ಷ ಸಂಕಷ್ಟದ ದಿನವೂ ಹೌದು. ಈ ಹಿನ್ನೆಲೆ ಕನ್ನಡ ಸಿನಿಮಾ ಕಾರ್ಮಿಕರಿಗೆ ಸಹಾಯ ಹಸ್ತ ನೀಡಲು ಅಮಿತಾಭ್​ ಬಚ್ಚನ್, ಸೋನಿ ಟಿವಿ ಹಾಗೂ ಕಲ್ಯಾಣ್ ಜುವೆಲ್ಲರ್ಸ್​​ ಮುಂದೆ ಬಂದಿದೆ.

ಆಹಾರ ಸಾಮಗ್ರಿಗಳನ್ನು ಖರೀದಿಸಬಹುದಾದಂತಹ ಬಿಗ್ ಬಜಾರ್ ಕೂಪನ್ ಗಳನ್ನು ನೀಡಲಾಗುತ್ತದೆ. ಈ ಕೂಪನ್ ಗಳನ್ನು ಅಖಿಲ ಭಾರತ ಸಿನಿಮಾ ಕಾರ್ಮಿಕರ ಮಹಾ ಒಕ್ಕೂಟದ ಎಲ್ಲಾ ಅಂಗ ಸಂಸ್ಥೆಗಳ ಸದಸ್ಯರಿಗೂ ಕೊಡಲಾಗುತ್ತಿದೆ.

ಸಿನಿಮಾ ಕಾರ್ಮಿಕರಿಗೆ ಗುಡ್​ ನ್ಯುಸ್​..

ಇಂದು ಬೆಳಗ್ಗೆ 11 ಗಂಟೆಗೆ ವಾಣಿಜ್ಯ ಮಂಡಳಿ ಬಳಿ ಇರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಒಕ್ಕೂಟದ ಎಲ್ಲಾ ಅಂಗ ಸಂಸ್ಥೆಗಳಿಗೆ ಕೂಪನ್ ಹಂಚಲು ನಿರ್ಧರಿಸಲಾಗಿದೆ. ಪ್ರಧಾನ ಕಾರ್ಯದರ್ಶಿ ಕೆ.ಎಸ್.ರವೀಂದ್ರನಾಥ್ , ಕರ್ನಾಟಕ ಚಲನಚಿತ್ರ ಕಾರ್ಮಿಕರ ಕಲಾವಿದರ ತಂತ್ರಜ್ಞರ ಒಕ್ಕೂಟ ಈ ವೇಳೆ ಹಾಜರಿರಲಿದೆ.

ABOUT THE AUTHOR

...view details