ಕರ್ನಾಟಕ

karnataka

ETV Bharat / sitara

50ನೇ ದಾದಾ ಸಹೇಬ್​​ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಅಮಿತಾಭ್​​​ ಬಚ್ಚನ್​​ - 50ನೇ ದಾದಾ ಸಹೇಬ್​​ ಫಾಲ್ಕೆ ಪ್ರಶಸ್ತಿ

ದೆಹಲಿಯನ್ನು ನಡೆದ ಕಾರ್ಯಕ್ರಮದಲ್ಲಿ ಅಬಿತಾಬ್​​ ಬಚ್ಚನ್​​ ರಾಷ್ಟ್ರಪತಿ ರಾಮನಾಥ್​ ಕೋವಿಂದ್​​ ಅವರಿಂದ 50ನೇ ದಾದಾ ಸಹೇಬ್​ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

Amitabh Bachchan Honoured Dadasaheb Phalke Award
50ನೇ ದಾದಾ ಸಹೇಬ್​​ ಫಾಲ್ಕೆ ಪ್ರಶಸ್ತಿ ಪಡೆದ ಅಮಿತಾಬ್​​ ಬಚ್ಚನ್​​

By

Published : Dec 29, 2019, 7:20 PM IST

Updated : Dec 29, 2019, 10:48 PM IST

ನವದೆಹಲಿ: ಬಾಲಿವುಡ್​​ ಹಿರಿಯ ನಟ ಅಮಿತಾಭ್​​ ಬಚ್ಚನ್ 50ನೇ ದಾದಾ ಸಹೇಬ್​ ಫಾಲ್ಕೆ ಪ್ರಶಸ್ತಿ​​ ಸ್ವೀಕರಿಸಿದ್ದಾರೆ.

ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಮಿತಾಭ್​ ಜಿ ​ ರಾಷ್ಟ್ರಪತಿ ರಾಮನಾಥ್​ ಕೋವಿಂದ್​​ ಅವರಿಂದ ದಾದಾ ಸಹೇಬ್​ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಈ ವೇಳೆ ಅಮಿತಾಭ್​​ ಜೊತೆ ಪತ್ನಿ ಜಯಾ ಬಚ್ಚನ್​ ಮತ್ತು ಪುತ್ರ ಅಭಿಷೇಕ್​ ಬಚ್ಚನ್​​​ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.

ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿಯನ್ನು ಭಾರತೀಯ ಚಿತ್ರ ರಂಗದಲ್ಲಿ ಉನ್ನತ ಸಾಧನೆ ಮಾಡಿದ ಮಹನೀರಿಗೆ ನೀಡಲಾಗುತ್ತದೆ. ಈ ಹಿಂದೆ 49 ಮಂದಿ ಈ ಪ್ರಶಸ್ತಿಯನ್ನು ಪಡೆದಿದ್ದು, ಬಚ್ಚನ್​​ 50ನೇ ದಾದಾ ಸೇಬ್​ ಫಾಲ್ಕೆ ಪ್ರಶಸ್ತಿ ಪಡೆದಿದ್ದಾರೆ.

ಇನ್ನು ಈ ಹಿಂದೆ ಡಿದೆಂಬರ್​​ 23 ರಂದು ಅಮಿತಾಭ್​​ ಬಚ್ಚನ್​ಗೆ ಪ್ರಶಸ್ತಿ ನೀಡಲು ದಿನಾಂಕವನ್ನು ನಿಗದಿ ಮಾಡಲಾಗಿತ್ತು. ಆದ್ರೆ ಆ ದಿನದಂದು ಅಮಿತಾಭ್​​​ಗೆ ಆರೋಗ್ಯದಲ್ಲಿ ಏರುಪೇರಾದ ಕಾರಣ ಸಮಾರಂಭದಲ್ಲಿ ಭಾಗಿಯಾಗಿರಲಿಲ್ಲ.

Last Updated : Dec 29, 2019, 10:48 PM IST

ABOUT THE AUTHOR

...view details