ಕರ್ನಾಟಕ

karnataka

ETV Bharat / sitara

ಕಷ್ಟ ಕಂಡ್ರೇ ಮನಸ್ಸು'ಬಿಗ್'ಬಿ.. ಬಿಹಾರ ನೆರೆ ಪೀಡಿತರಿಗೆ ₹ 51 ಲಕ್ಷ ಕೊಟ್ಟ ಅಮಿತಾಬ್​​.. - ಬಿಹಾರಕ್ಕೆ ಅಮಿತಾಬ್​​​ 51 ಲಕ್ಷ ಧನ ಸಹಾಯ

ಬಿಹಾರದಲ್ಲಿ ಸಂಭವಿಸಿರುವ ನೈಸರ್ಗಿಕ ವಿಕೋಪದಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಈ ದುರಂತದಲ್ಲಿ ಸಿಲುಕಿರುವ ಜನರ ಪರಿಸ್ಥಿತಿಯಿಂದ ನಾನು ದುಃಖಿತನಾಗಿದ್ದೇನೆ. ನೆರೆ ಸಂತ್ರಸ್ತರಿಗೆ ನನ್ನಿಂದ ಒಂದು ಸಣ್ಣ ಸಹಾಯ ಮಾಡಲಿದ್ದೇನೆ ಎಂದು ಪತ್ರದಲ್ಲಿ ಬರೆದು, 51 ಲಕ್ಷ ರೂಪಾಯಿಯನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಕಳುಹಿಸಿದ್ದಾರೆ.

ಅಮಿತಾಬ್​​ ಬಚ್ಚನ್​​​

By

Published : Oct 9, 2019, 8:51 PM IST

ಪಾಟ್ನಾ: ದೇಶದಲ್ಲಿ ಪ್ರವಾಹ ಪೀಡಿದ ಪ್ರದೇಶದ ಜನರ ಸಹಾಯಕ್ಕೆ ನಿಂತಿರುವ ಸೂಪರ್​ಸ್ಟಾರ್​ ಅಮಿತಾಬ್​ ಬಚ್ಚನ್​ ಬಿಹಾರದಲ್ಲಿ ಪ್ರವಾಹ ಪೀಡಿತ ಜನರಿಗೆ ₹ 51 ಲಕ್ಷ ಹಣದ ಸಹಾಯ ಮಾಡಿದ್ದಾರೆ. ಬಿಹಾರ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಮ್ಮ ಪ್ರತಿನಿಧಿ ವಿಜಯ್‌ನಾಥ್ ಮಿಶ್ರಾ ಮೂಲಕ 51 ಲಕ್ಷ ರೂಪಾಯಿಯನ್ನು ಕಳುಹಿಸಿದ್ದಾರೆ.

ಪರಿಹಾರ ನಿಧಿಗೆ ಚೆಕ್​ ಹಸ್ತಾಂತರ..

ಈ ಬಗ್ಗೆ ಬಿಹಾರ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಅಮಿತ್ ಬಚ್ಚನ್​, ಬಿಹಾರದಲ್ಲಿ ಸಂಭವಿಸಿರುವ ನೈಸರ್ಗಿಕ ವಿಕೋಪದಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಈ ದುರಂತದಲ್ಲಿ ಸಿಲುಕಿರುವ ಜನರ ಪರಿಸ್ಥಿತಿಯಿಂದ ನಾನು ದುಃಖಿತನಾಗಿದ್ದೇನೆ. ನೆರೆ ಸಂತ್ರಸ್ತರಿಗೆ ನನ್ನಿಂದ ಒಂದು ಸಣ್ಣ ಸಹಾಯ ಮಾಡಲಿದ್ದೇನೆ ಎಂದು ಪತ್ರದಲ್ಲಿ ಬರೆದು, 51 ಲಕ್ಷ ರೂಪಾಯಿಯನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಕಳುಹಿಸಿದ್ದಾರೆ.

ಬಿಹಾರ ಸಿಎಂಗೆ ಬಿಗ್‌ಬಿ ಬರೆದಿರುವ ಪತ್ರ..

ಬಿಹಾರ ಡೆಪ್ಯುಟಿ ಸಿಎಂರಿಂದ ಬಿಗ್​​ ಬಿಗೆ ಧನ್ಯವಾದ :

ಅಮಿತಾಬ್​ ಬಚ್ಚನ್​ರಿಂದ ಚೆಕ್​ ಪಡೆದಿರುವ ಬಿಹಾರ ಡೆಪ್ಯೂಟಿ ಸಿಎಂ ಸುಶೀಲ್‌ಕುಮಾರ್​ ಧನ್ಯವಾದ ತಿಳಿಸಿದ್ದಾರೆ. ಈ ಹಿಂದೆ ಅಮಿತಾಬ್​ ಬಚ್ಚನ್​, ಬಿಹಾರದ 21 ಸಾವಿರ ರೈತರ ಸಾಲವನ್ನು ಬರಿಸಿ ಬಿಹಾರಕ್ಕೆ ಸಹಾಯ ಮಾಡಿದ್ದರು. ಹೀಗೆ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುತ್ತಾ ಬಂದಿರುವ ಬಿಗ್‌ಬಿಯ ಈ ಸಹಾಯದ ಹೆಜ್ಜೆ ಇದೇ ಮೊದಲಲ್ಲ. ಈ ಹಿಂದೆ ಉತ್ತರಪ್ರದೇಶದ ಸಾವಿರಾರು ರೈತರಿಗೂ ಸಹಾಯ ಮಾಡಿದ್ದರು.

ಅಮಿತಾಬ್​​ ಕೊಟ್ಟಿರುವ ಚೆಕ್​​​..

ಪುಲ್ವಾಮಾ ಹುತಾತ್ಮರ ಕುಟುಂಬಗಳಿಗೆ ಆರ್ಥಿಕ ನೆರವು:

ಅಮಿತಾಬ್​ ಬಚ್ಚನ್​​ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾಗಿರುವ ಯೋಧರ ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡಿದ್ದರು.

ABOUT THE AUTHOR

...view details