ಕರ್ನಾಟಕ

karnataka

ETV Bharat / sitara

ಮಗಳ ಜೊತೆ ಸ್ಕ್ರೀನ್​ ಶೇರ್​ ಮಾಡಿದ ಬಿಗ್​ ಬಿ - Amitabh Bachchan acting with daughter

ಬಾಲಿವುಡ್​​​ ಬಿಗ್​​ ಬಿ ಅಮಿತಾಬ್​​ ಬಚ್ಚನ್​ ಮತ್ತು ಶ್ವೇತಾ ಬಚ್ಚನ್​​ ಜಾಹೀರಾತೊಂದರಲ್ಲಿ ನಟಿಸುತ್ತಿದ್ದಾರೆ. ಇವರ ಜೊತೆ ಅಮಿತಾಬ್​​ ಧರ್ಮಪತ್ನಿ ಜಯಾ ಬಚ್ಚನ್​ ಕೂಡ ನಟಿಸುತ್ತಿದ್ದಾರೆ..

ಮಗಳ ಜೊತೆ ಸ್ಕ್ರೀನ್​ ಶೇರ್​ ಮಾಡಿದ ಬಿಗ್​ ಬಿ
ಮಗಳ ಜೊತೆ ಸ್ಕ್ರೀನ್​ ಶೇರ್​ ಮಾಡಿದ ಬಿಗ್​ ಬಿ

By

Published : Nov 25, 2020, 9:45 PM IST

ಅಮಿತಾಬ್​​ ಬಚ್ಚನ್​​​ ತಮ್ಮ ಕುಟುಂಬದ ಎಲ್ಲಾ ಸದಸ್ಯರ ಜೊತೆ ನಟಿಸಿದ್ದಾರೆ. ಆದ್ರೆ, ಮಗಳ ಜೊತೆ ನಟಿಸಿರಲಿಲ್ಲ. ಇದೀಗ ಬಿಗ್​ ಬಿ ತಮ್ಮ ಮಗಳ ಜೊತೆಯಲ್ಲೂ ಸ್ಕ್ರೀನ್​​ ಶೇರ್​​ ಮಾಡುತ್ತಿದ್ದಾರೆ.

ಬಿಗ್​ ಬಿ ತಮ್ಮ ಮಗಳು ಶ್ವೇತಾ ಬಚ್ಚನ್​​ ಜೊತೆ ಇದೀಗ ನಟಿಸಲು ಮುಂದಾಗಿದ್ದಾರೆ. ಹಾಗಾದ್ರೆ, ಅಪ್ಪ-ಮಗಳು ಯಾವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರದ ಕಥೆ ಏನು ಎಂಬ ಕುತೂಹಲ ಎಲ್ಲರಲ್ಲೂ ಮೂಡುತ್ತದೆ. ಆದ್ರೆ, ವಿಷ್ಯ ಏನಂದ್ರೆ ಶ್ವೇತಾ ಮತ್ತು ಅಮಿತಾಬ್​ ಬಚ್ಚನ್​ ಸಿನಿಮಾದಲ್ಲಿ ನಟಿಸುತ್ತಿಲ್ಲ.

ಬಾಲಿವುಡ್​​​ ಬಿಗ್​​ ಬಿ ಅಮಿತಾಬ್​​ ಬಚ್ಚನ್​ ಮತ್ತು ಶ್ವೇತಾ ಬಚ್ಚನ್​​ ಜಾಹೀರಾತೊಂದರಲ್ಲಿ ನಟಿಸುತ್ತಿದ್ದಾರೆ. ಇವರ ಜೊತೆ ಅಮಿತಾಬ್​​ ಧರ್ಮಪತ್ನಿ ಜಯಾ ಬಚ್ಚನ್​ ಕೂಡ ನಟಿಸುತ್ತಿದ್ದಾರೆ. ಆದ್ರೆ, ಆ ಜಾಹೀರಾತಿನ ಬ್ರಾಂಡ್​​ ಯಾವುದು ಎಂದು ಇನ್ನೂ ತಿಳಿದಿಲ್ಲ.

ಈ ಬಗ್ಗೆ ಮಾಹಿತಿ ನೀಡಿರುವ ಅಮಿತಾಬ್​ ತಮ್ಮ ಟ್ವಿಟರ್​​ನಲ್ಲಿ ಫೋಟೋ ಒಂದನ್ನು ಹಾಕಿ ಕುಟುಂಬದ ಜೊತೆ ಕೆಲಸ ಎಂದು ಬರೆದುಕೊಂಡಿದ್ದಾರೆ.

ABOUT THE AUTHOR

...view details