ಹೈದರಾಬಾದ್ : ಬಾಲಿವುಡ್ ನಟಿ ತಾರಾ ಸುತಾರಿಯಾ ಮತ್ತು ಅರ್ಜುನ್ ಕಪೂರ್ ತಮ್ಮ ಮುಂದಿನ ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರ 'ಏಕ್ ವಿಲನ್ ರಿಟರ್ನ್ಸ್' ನ ಚಿತ್ರೀಕರಣ ಪ್ರಾರಂಭಿಸಿದ್ದಾಗಿ ತಿಳಿಸಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಕ್ಲ್ಯಾಪ್ ಬೋರ್ಡ್ನ ಬ್ಲೂಮ್ ರಂಗ್ ವಿಡಿಯೋ ಹಂಚಿಕೊಂಡಿರುವ ತಾರಾ ಈ ಕುರಿತು ಮಾಹಿತಿ ನೀಡಿದ್ದಾರೆ. ತನ್ನ ಪೋಸ್ಟ್ ಸಹ ನಟ ಅರ್ಜುನ್, ನಿರ್ದೇಶಕ ಮೋಹಿತ್ ಸೂರಿ ಮತ್ತು ನಿರ್ಮಾಪಕ ಅಮುಲ್ ವಿಕಾಸ್ ಮೋಹನ್ ಅವರಿಗೆ ಟ್ಯಾಗ್ ಮಾಡಿದ್ದಾರೆ.
ತಾರಾ ಸುತಾರಿಯಾ ಇನ್ಸ್ಟಾಗ್ರಾಂ ಪೋಸ್ಟ್ ಅರ್ಜುನ್ ಕೂಡ ತಾರಾ ಅವರ ಪೋಸ್ಟ್ ಶೇರ್ ಮಾಡುವ ಮೂಲಕ ಅಭಿಮಾನಿಗಳ ಚಿತ್ರೀಕರಣ ಕುರಿತು ಮಾಹಿತಿ ನೀಡಿದ್ದಾರೆ. 2017ರ ಡ್ರಾಮ ಫಿಲಂ ಹಾಲ್ಫ್ ಗರ್ಲ್ ಫ್ರೆಂಡ್ ಬಳಿಕ ಅರ್ಜುನ್ ಮತ್ತು ನಿರ್ದೇಶಕ ಮೋಹಿತ್ ಮತ್ತೆ ಜೊತೆಯಾಗುತ್ತಿದ್ದಾರೆ.
ಚಿತ್ರದ ಎರಡನೇ ಶೂಟಿಂಗ್ ಶೆಡ್ಯೂಲ್ಗಾಗಿ ಚಿತ್ರತಂಡ ಗೋವಾಕ್ಕೆ ತೆರಳಿದೆ. ಮೊದಲ ಶೂಟಿಂಗ್ ಮಾರ್ಚ್ 1 ರಂದು ಮುಂಬೈನಲ್ಲಿ ದಿಶಾ ಪಟಾನಿ ಮತ್ತು ಜಾನ್ ಅಬ್ರಹಾಂ ನಡುವೆ ಚಿತ್ರೀಕರಿಸಲಾಗಿದೆ. ಕೋವಿಡ್ ನಡುವೆ ಗೋವಾಕ್ಕೆ ತೆರಳಿರುವ ಚಿತ್ರತಂಡ ಕೆಲ ಸುರಕ್ಷಿತ ಸ್ಥಳಗಳಲ್ಲಿ ಚಿತ್ರೀಕರಣ ಮುಂದುವರೆಸಲಿದೆ.
ಏಕ್ ವಿಲನ್ ರಿಟರ್ನ್ಸ್ 2014 ರ ಬಾಲಿವುಡ್ ಚಿತ್ರ ಏಕ್ ವಿಲನ್ನ ಮುಂದುವರಿದ ಭಾಗವಾಗಿದೆ. ಮೊದಲ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ, ಶ್ರದ್ಧಾ ಕಪೂರ್ ಮತ್ತು ರಿತೀಶ್ ದೇಶ್ಮುಖ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.