ಕರ್ನಾಟಕ

karnataka

ETV Bharat / sitara

ಅಮೆರಿಕ ಪ್ರಜೆಯ ಬಾಯಲ್ಲಿ ಕಿರಿಕ್​​​ ಪಾರ್ಟಿ ಹಾಡು! - ಕಿರಿಕ್​ ಪಾರ್ಟಿ ಹಾಡು

ಬೆಳಗೆದ್ದು ಯಾರಾ ಮುಖವ ನಾನು ನೋಡಿದೆ ಅನ್ನೋ ಹಾಡು ಕೇವಲ ಕರ್ನಾಟಕದಲ್ಲಿ ಮಾತ್ರ ಫೇಮಸ್ಸಾಗಿಲ್ಲ. ಅಮೆರಿಕದಲ್ಲೂ ಈ ಸಾಂಗ್​ ಫೇಮಸ್ಸು. ಯಾಕಂದ್ರೆ ಇಲ್ಲೊಬ್ಬ ಅಮೆರಿಕನ್​ ಈ ಹಾಡನ್ನು ಸೊಗಸಾಗಿ ಹಾಡಿದ್ದಾನೆ.

ಅಮೇರಿಕಾ ಪ್ರಜೆಯ ಬಾಯಲ್ಲಿ ಬಂತು ಕಿರಿಕ್​ ಪಾರ್ಟಿ ಹಾಡು...!

By

Published : Sep 7, 2019, 8:49 PM IST

ಕಿರಿಕ್​ ಪಾರ್ಟಿ ಸಿನಿಮಾ ರಿಲೀಸ್​ ಆದ ಸಮಯದಲ್ಲಿ ಯಾರ ಬಾಯಲ್ಲಿ ನೋಡಿದ್ರೂ ಬೆಳಗೆದ್ದು ಯಾರಾ ಮುಖವ ನಾನೂ ನೋಡಿದೆ ಹಾಡು ಗುನುಗುಡುತ್ತಿತ್ತು. ಅದರಲ್ಲೂ ಲವ್​ ಬರ್ಡ್ಸ್​​​ಗಳಿಗೆ ಈ ಹಾಡು ಹೇಳಿ ಮಾಡಿಸಿದಂತಿತ್ತು. ಈ ಹಾಡನ್ನು ಧನಂಜಯ್​ ರಂಜನ್​​ ಬರೆದಿದ್ದು, ವಿಜಯ್​ ಪ್ರಕಾಶ್​ ಧ್ವನಿ ನೀಡಿದ್ದಾರೆ.

ಅಯ್ಯೋ ಸಿನಿಮಾ ರಿಲೀಸ್​ ಆಗಿ ಇಷ್ಟೊಂದು ದಿನ ಕಳೆದಾಗಿದೆ. ಮತ್ತೆ ಇದನ್ನೆಲ್ಲ ಈಗ ಯಾಕೆ ಹೇಳ್ತಿದ್ದಾರೆ ಅಂದ್ಕೋಡ್ರಾ... ಹೌದು ಬೆಳಗೆದ್ದು ಯಾರಾ ಮುಖವ ನಾನು ನೋಡಿದೆ ಅನ್ನೋ ಹಾಡು ಕೇವಲ ಕರ್ನಾಟಕದಲ್ಲಿ ಮಾತ್ರ ಫೇಮಸ್ಸಾಗಿಲ್ಲ. ಅಮೆರಿಕದಲ್ಲೂ ಈ ಸಾಂಗ್​ ಫೇಮಸ್ಸು. ಯಾಕಂದ್ರೆ ಇಲ್ಲೊಬ್ಬ ಅಮೆರಿಕನ್​ ಈ ಹಾಡನ್ನು ಸೊಗಸಾಗಿ ಹಾಡಿದ್ದಾನೆ.

ಅಮೆರಿಕ ಪ್ರಜೆ ಹಾಡಿರುವ ಈ ಹಾಡನ್ನು ರಕ್ಷಿತ್​​ ಶೆಟ್ಟಿ ತಮ್ಮ ಟ್ವಿಟರ್​ ಖಾತೆಯಲ್ಲಿ ಶೇರ್​​ ಮಾಡಿಕೊಂಡಿದ್ದು, ಕಲೆಯು ಪ್ರಪಂಚವನ್ನು ಒಂದು ಮಾಡುತ್ತದೆ ಎಂದು ಬರೆದುಕೊಂಡಿದ್ದಾರೆ.

ABOUT THE AUTHOR

...view details